×
Ad

ಸಮಾಜದಲ್ಲಿ ಸೌಹಾರ್ದತೆ ಬಲಪಡಿಸಿ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸಿ: ದೇಶದ ಜನತೆಗೆ ಖರ್ಗೆಯಿಂದ ಹೊಸ ವರ್ಷದ ಸಂದೇಶ

Update: 2026-01-01 12:51 IST

Photo| ANI

ಹೊಸ ದಿಲ್ಲಿ: 2026ರಲ್ಲಿ ದೇಶದ ಜನತೆ ಸಂವಿಧಾನ, ಪ್ರಜಾಸತ್ತಾತ್ಮಕ ಮೌಲ್ಯವನ್ನು ರಕ್ಷಿಸಲು ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಗಟ್ಟಿಗೊಳಿಸಲು ಸಾಮೂಹಿಕ ಪ್ರಯತ್ನ ಮಾಡಬೇಕು ಎಂದು ಹೊಸ ವರ್ಷದ ಪ್ರಯುಕ್ತ ಕೋರಿರುವ ಶುಭಾಶಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.

ಇಡೀ ದೇಶದ ಜನತೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವಾಗ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂದೇಶವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

“ಈ ವರ್ಷವನ್ನು ದುರ್ಬಲರ ಹಕ್ಕುಗಳನ್ನು ರಕ್ಷಿಸುವ ಬೃಹತ್ ಆಂದೋಲನವನ್ನಾಗಿ ಪರಿವರ್ತಿಸಿ” ಎಂದೂ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ.

“ಇಂದಿನ ಸಂಭ್ರಮದ ಹೊಸ ವರ್ಷದಲ್ಲಿ ನಾನು ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರುತ್ತೇನೆ. ನಾವು ಈ ವರ್ಷವನ್ನು ದುರ್ಬಲರ ಹಕ್ಕುಗಳು, ಉದ್ಯೋಗದ ಹಕ್ಕು, ಮತದಾನದ ಹಕ್ಕು, ಘನತೆಯಿಂದ ಬದುಕುವ ಹಕ್ಕನ್ನು ರಕ್ಷಿಸುವ ಬೃಹತ್ ಆಂದೋಲನವನ್ನಾಗಿ ಪರಿವರ್ತಿಸೋಣ. ನಾವೆಲ್ಲರೂ ಒಟ್ಟಾಗಿ ಸಂವಿಧಾನ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸೋಣ. ನಾಗರಿಕರನ್ನು ಸಬಲಗೊಳಿಸೋಣ. ಸಮಾಜದಲ್ಲಿ ಸೌಹಾರ್ದತೆಯನ್ನು ಬಲಗೊಳಿಸೋಣ” ಎಂದು ಮಲ್ಲಿಕಾರ್ಜುನ ಖರ್ಗೆ ಹೊಸ ವರ್ಷದ ಸಂದೇಶದಲ್ಲಿ ತಿಳಿಸಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News