×
Ad

ಮಹಾರಾಷ್ಟ್ರದಲ್ಲಿ ಸೆರೆಯಲ್ಲಿದ್ದ ಬುಡಕಟ್ಟು ಸಮುದಾಯದ 17 ಮಂದಿಯ ರಕ್ಷಣೆ

Update: 2025-02-12 21:07 IST

PC : Photo | Special Arrangement \ newindianexpress.com

ಭೋಪಾಲ: ಮಹಾರಾಷ್ಟ್ರದ ಧಾರಾಶಿವ (ಉಸ್ಮಾನಾಬಾದ್) ಜಿಲ್ಲೆಯಲ್ಲಿ ಸೆರೆಯಲ್ಲಿದ್ದ ನೈಋತ್ಯ ಮಧ್ಯಪ್ರದೇಶದ ಬುಡಕಟ್ಟುಗೆ ಸೇರಿದ ಐವರು ಮಹಿಳೆಯರು ಹಾಗೂ 7 ಮಕ್ಕಳು ಸೇರಿದಂತೆ 17ಕ್ಕೂ ಅಧಿಕ ಮಂದಿಯನ್ನು ಬಿಡುಗಡೆ ಮಾಡಲಾಗಿದೆ.

ಸ್ಥಳೀಯ ಗುತ್ತಿಗೆಗಾರರು ಕಬ್ಬು ಕೊಯ್ಲಿಗೆ ಸಂಬಂಧಿಸಿದ ಕೆಲಸಕ್ಕೆ ಅವರನ್ನು ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಗೆ ಕರೆದೊಯ್ದಿದ್ದರು ಎಂದು ಮೂಲಗಳು ತಿಳಿಸಿವೆ.

ನೈಋತ್ಯ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಬರೇಲಾ ಬುಡಕಟ್ಟಿಗೆ ಸೇರಿದ 17 ಮಂದಿಯನ್ನು ಮಹಾರಾಷ್ಟ್ರದ ಜಲಗಾಂವ್ ಮೂಲದ ಗುತ್ತಿಗೆಗಾರ ದೇವಿಸಿಂಗ್ ನಾಲ್ಕು ತಿಂಗಳ ಹಿಂದೆ ಕರೆದುಕೊಂಡು ಹೋಗಿದ್ದರು. ಮಹಾರಾಷ್ಟ್ರದ ಧಾರಾಶಿವ (ಉಸ್ಮನಾಬಾದ್) ಜಿಲ್ಲೆಯ ಗಂಭೀರ್ವಾಡಿ ಗ್ರಾಮದಲ್ಲಿ ಶ್ರೀಮಂತ ರೈತರ ಕಬ್ಬಿನ ಗದ್ದೆಗಳಲ್ಲಿ ಕಬ್ಬಿನ ಕೊಯ್ಲಿಗೆ ಸಂಬಂಧಿಸಿದ ಕೆಲಸಗಳಿಗೆ ಅವರನ್ನು ಕರೆದೊಯ್ಯಲಾಗಿತ್ತು.

ಆದರೆ, ಗುತ್ತಿಗೆಗಾರ ದೇವಿಸಿಂಗ್ ಈ ಬುಡಕಟ್ಟು ಜನರನ್ನು ಧಾರಾಶಿವ್ ಜಿಲ್ಲೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಇದರಿಂದ ಬುಡಕಟ್ಟು ಜನರು ಅಲ್ಲಿ ಸಿಲುಕಿಕೊಂಡರು. ಸೂಕ್ತ ಆಹಾರದ ಕೊರತೆ ಹಾಗೂ ಇತರ ಸಮಸ್ಯೆಗಳ ಕಾರಣದಿಂದ ಬುಡಕಟ್ಟು ಜನರು ತಮ್ಮ ವೇತನ ಪಾವತಿಸುವಂತೆ ಕಬ್ಬಿನ ಗದ್ದೆಯ ಮಾಲಕರಲ್ಲಿ ವಿನಂತಿಸಿದ್ದರು.

ಜನವರಿಯಲ್ಲಿ ಬಂಭಾಡಾ ಗ್ರಾಮ (ಬಂಧನಕ್ಕೊಳಗಾದ ಕಾರ್ಮಿಕರು ಸೇರಿದ ಮಧ್ಯಪ್ರದೇಶದ ಗ್ರಾಮ)ದ ನಿವಾಸಿಗಳು ಬುರ್ಹಾನ್‌ಪುರ ಜಿಲ್ಲಾಡಳಿತಕ್ಕೆ ನೀಡಿದ ದೂರಿನಲ್ಲಿ ಕಬ್ಬಿನ ಗದ್ದೆಯ ಮಾಲಕ ಅವರಿಗೆ ಭರವಸೆ ನೀಡಿದ ವೇತನ ನೀಡುವ ಬದಲು ಹಲ್ಲೆ ನಡೆಸಿದ್ದಾರೆ ಹಾಗೂ ಅನುಚಿತವಾಗಿ ವರ್ತಿಸಿದ್ದಾರೆ.

ಹೊರಜಗತ್ತಿನೊಂದಿಗೆ ಅವರ ಸಂಪರ್ಕವನ್ನು ತಪ್ಪಿಸಲು ಸೆಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News