×
Ad

ಲೈಂಗಿಕ ದೌರ್ಜನ್ಯ ಪ್ರಕರಣ : ಸೆ.3 ರ ವರೆಗೆ ಮಲಯಾಳಂ ನಟ ಮುಕೇಶ್‌ ಅವರನ್ನು ಬಂಧಿಸದಂತೆ ಆದೇಶ

Update: 2024-08-29 19:51 IST

ನಟ, ಶಾಸಕ ಎಂ.ಮುಕೇಶ್ (Photo: Facebook)

ತಿರುವನಂತಪುರಂ : ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ಶಾಸಕ ಕೆ. ಮುಕೇಶ್ ಅವರನ್ನು ಸೆ.3ರವರಗೆ ಬಂಧಿಸದಂತೆ ಕೊಚ್ಚಿಯ ಸ್ಥಳೀಯ ನ್ಯಾಯಾಲಯವೊಂದು ಆದೇಶಿಸಿದೆ.

2010ರಲ್ಲಿ ಮುಕೇಶ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ನಟಿಯೊಬ್ಬರು ಆರೋಪಿಸಿದ್ದರು. ಈ ಸಂಬಂಧ ಐಪಿಸಿಯ ಸೆಕ್ಷನ್‌ 376 (ಅತ್ಯಾಚಾರ)ರ ಅಡಿಯಲ್ಲಿ ಕೊಚ್ಚಿಯ ಮರಾಡು ಪೊಲೀಸ್ ಠಾಣೆಯಲ್ಲಿ ಬುಧವಾರ ರಾತ್ರಿ ದೂರು ದಾಖಲಾಗಿತ್ತು.

ಆ ಬಳಿಕ ನಿರೀಕ್ಷಣಾ ಜಾಮೀನು ಕೋರಿ ಕೆ. ಮುಕೇಶ್ ಕೊಚ್ಚಿಯ ಪ್ರಿನ್ಸಿಪಾಲ್ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸಂತ್ರಸ್ತೆಯು ದುರುದ್ದೇಶದಿಂದ ದೂರು ನೀಡಿದ್ದಾರೆ ಎಂದು ಮುಕೇಶ್ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಹೇಳಿದ್ದರು. ಇದರಿಂದ ತಮ್ಮ ಸಿನಿಮಾ ಹಾಗೂ ರಾಜಕೀಯ ಜೀವನಕ್ಕೆ ಕಳಂಕ ತರುವ ಉದ್ದೇಶದಿಂದ ದೂರು ದಾಖಲಿಸಲಾಗಿದೆ ಎಂದು ಉಲ್ಲೇಖಿಸಿದ್ದರು.

ಆರೋಪಿಯು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರನ್ನು ಸೆ.3ರವರೆಗೆ ಬಂಧಿಸಬಾರದು ಎಂದು ಪ್ರಕರಣದ ತನಿಖಾಧಿಕಾರಿಗೆ ನ್ಯಾಯಾಲಯವು ಸೂಚಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News