ಹಾಸಿಗೆಯಲ್ಲಿ ಮಲ ವಿಸರ್ಜಿಸಿದ ಅಸ್ವಸ್ಥ ಪತ್ನಿಯನ್ನು ಹೊಡೆದು ಸಾಯಿಸಿದ ಪತಿ!
ಸಾಂದರ್ಭಿಕ ಚಿತ್ರ
ಸಹರಣಪುರ, ಉತ್ತರ ಪ್ರದೇಶ: ಹಾಸಿಗೆಯಲ್ಲಿ ಮಲ ವಿಸರ್ಜಿಸಿದ ಕಾರಣಕ್ಕಾಗಿ ಅಸ್ವಸ್ಥತೆಯಿಂದ ಬಳಲುತ್ತಿದ್ದ 29 ವರ್ಷ ವಯಸ್ಸಿನ ಮಹಿಳೆಯನ್ನು ಆಕೆಯ ಪತಿಯೇ ಹೊಡೆದು ಸಾಯಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಗುರುವಾರ ರಾತ್ರಿ ಅನಾರೋಗ್ಯದಿಂದ ಬಳಲುತ್ತಿದ್ದ ಅಲ್ಕಾ ಎಂಬ ಮಹಿಳೆ ಹಾಸಿಗೆಯಲ್ಲಿ ಮಲ ವಿಸರ್ಜನೆ ಮಾಡಿದ್ದು, ಪತಿ ಸಂದೀಪ್ (30) ಅವರ ಕೋಪಕ್ಕೆ ಕಾರಣವಾಯಿತು ಎಂದು ಪೊಲೀಸ್ ಅಧೀಕ್ಷಕ ಅಭಿಮನ್ಯು ಮಂಗಲಿಕ್ ಹೇಳಿದ್ದಾರೆ. ಕೋಪದಲ್ಲಿ ಸಂದೀಪ್ ಪತ್ನಿಯನ್ನು ಹೊಡೆದು ಸಾಯಿಸಿದ ಎಂದು ಅವರು ವಿವರಿಸಿದ್ದಾರೆ.
ಈ ದಂಪತಿ ಹೊಸ ಶಾರದಾನಗರದ ನಿವಾಸಿಗಳಾಗಿದ್ದು, 10 ವರ್ಷ ಹಿಂದೆ ವಿವಾಹವಾಗಿದ್ದರು. ಇವರಿಗೆ ಮಕ್ಕಳಿರಲಿಲ್ಲ. ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಅಭಿಮನ್ಯು ಹೇಳಿದ್ದಾರೆ. ಇದು ಇಬ್ಬರ ನಡುವೆ ಆಗ್ಗಾಗ್ಗೆ ವಾಗ್ವಾದಕ್ಕೆ ಕಾರಣವಾಗಿತ್ತು. ಗುರುವಾರ ರಾತ್ರಿ ಇದು ವಿಕೋಪಕ್ಕೆ ಹೋಗಿ ಪತ್ನಿಯ ಕೊನೆಯಲ್ಲಿ ಪರ್ಯವಸಾನ ಹೊಂದಿದೆ ಎಂದು ತಿಳಿಸಿದ್ದಾರೆ.
ಅಕ್ಕಪಕ್ಕದವರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ, ಸಂದೀಪ್ ಶವದ ಪಕ್ಕದಲ್ಲೇ ಕುಳಿತಿದ್ದ ಎಂದು ಹೇಳಿದ್ದಾರೆ. ಸಂದೀಪ್ನನ್ನು ಬಂಧಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.