×
Ad

'ರೀಲ್' ಮಾಡುತ್ತಿದ್ದ ಯುವಕನನ್ನು ತುಳಿದು ಹತ್ಯೆಗೈದ ಆನೆ

Update: 2024-06-14 10:51 IST

Screengrab:X/@bstvlive

ಬಿಜ್ನೋರ್: ಆನೆಯೊಂದು ರೀಲ್ ಮಾಡುತ್ತಿದ್ದ 24 ವರ್ಷದ ಯುವಕನೊಬ್ಬನನ್ನು ತುಳಿದು ಹತ್ಯೆಗೈದಿರುವ ಘಟನೆ ಬುಧವಾರ ಸಂಜೆ ಬಿಜ್ನೋರ್‌ನ ಧಮ್ಪುರ್ ಪ್ರದೇಶದಲ್ಲಿ ನಡೆದಿದೆ.

ಮೃತ ಯುವಕನನ್ನು ಬಾಗ್ದಾದ್ ಅನ್ಸಾರಿ ಗ್ರಾಮದ ನಿವಾಸಿ ಮುಹಮ್ಮದ್ ಮುರ್ಶ್ಲೀನ್ ಎಂದು ಗುರುತಿಸಲಾಗಿದೆ.

ಧಮ್ಪುರ್ ಅರಣ್ಯ ವಲಯದ ಬಳಿ ಪುಂಡಾನೆಯೊಂದು ಘೀಳಿಡುತ್ತಾ ಬರುತ್ತಿರುವ ಸದ್ದನ್ನು ಕೇಳಿ ಮುಹಮ್ಮದ್ ಮುರ್ಶ್ಲೀನ್ ತನ್ನ ಗೆಳೆಯರೊಂದಿಗೆ ಮನೆಯಿಂದ ಹೊರಗೆ ಬಂದನು. ಆನೆಯನ್ನು ಕಂಡ ಆತ, ಅದರ ರೀಲ್ ಮಾಡಲು ಪ್ರಾರಂಭಿಸಿದನು.

ಈ ವೇಳೆ ದಾಳಿ ನಡೆಸಿದ ಆನೆ ತನ್ನ ಸೊಂಡಿಲಿನಿಂದ ಆತನನ್ನು ಮೇಲೆತ್ತಿ, ನಂತರ ನೆಲಕ್ಕೆ ಬಡಿಯಿತು. ಇದಾದ ನಂತರ ಆತನನ್ನು ಕಾಲಿನಿಂದ ತುಳಿದು ಹತ್ಯೆಗೈದಿತು ಎಂದು ಪ್ರತ್ಯಕ್ಷದರ್ಶಿಗಳ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಜ್ನೋರ್ ಉಪ ವಲಯ ಅರಣ್ಯಾಧಿಕಾರಿ ಗ್ಯಾನ್ ಸಿಂಗ್, "ಆನೆಯು ಬಹುಶಃ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಕಲಗಢ್ ಪ್ರದೇಶದಿಂದ ಹೊರ ಬಂದಿರುವಂತಿದೆ. ಜನನಿಬಿಡ ಪ್ರದೇಶದಿಂದ ಸಹುವಾಲಾ ಅರಣ್ಯ ವಲಯಕ್ಕೆ ಆನೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News