×
Ad

ರಾಜಾ ರಘುವಂಶಿ ಹತ್ಯೆ ಪ್ರಕರಣ: ಪ್ರಯಾಣಿಕನಿಂದ ವಿಮಾನ ನಿಲ್ದಾಣದಲ್ಲಿ ಆರೋಪಿ ಮೇಲೆ ಹಲ್ಲೆ

Update: 2025-06-11 08:17 IST

PC | X @ians_india

ಇಂಧೋರ್: ರಾಜಾ ರಘುವಂಶಿ ಹತ್ಯೆ ಪ್ರಕರಣದ ಆರೋಪಿಯ ಮೇಲೆ ದೇವಿ ಅಹಲ್ಯಾದೇವಿ ಹೋಳ್ಕರ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಹಲ್ಲೆ ನಡೆಸಿದ ಪ್ರಕರಣ ಮಂಗಳವಾರ ರಾತ್ರಿ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ನಾಲ್ಕು ಮಂದಿ ಆರೋಪಿಗಳ ಜೊತೆಗೆ ಮೇಘಾಲಯ ಪೊಲೀಸ್ ತಂಡ ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ವಿಮಾನ ಪ್ರಯಾಣಿಕ ಆರೋಪಿಯ ಮೇಲೆ ಹಲ್ಲೆ  ನಡೆಸಿದ್ದಾನೆ ಎಂದು ಹೇಳಲಾಗಿದೆ.

ಲಗೇಜ್‍ನೊಂದಿಗೆ ಕಾಯತ್ತಿದ್ದ ಪ್ರಯಾಣಿಕ, ಆರೋಪಿಗಳು ನಡೆದು ಬರುತ್ತಿದ್ದುದನ್ನು ಕಂಡ ಕೂಡಲೇ ಒಬ್ಬ ಆರೋಪಿಯನ್ನು ಹೊಡೆದು, ರಾಷ್ಟ್ರದ ಗಮನ ಸೆಳೆದ ಹತ್ಯೆ ಪ್ರಕರಣದ ವಿರುದ್ಧ ತನ್ನ ಆಕ್ರೋಶ ವ್ಯಕ್ತಪಡಿಸಿದ ಎಂದು ತಿಳಿದುಬಂದಿದೆ. ಆರೋಪಿಗಳಿಗೆ ಮಾಸ್ಕ್ ತೊಡಿಸಿದ್ದರಿಂದ ಅರೋಪಿಗಳ ಪೈಕಿ ಹೊಡೆತ ತಿಂದವರು ಯಾರು ಎನ್ನುವುದು ಸ್ಪಷ್ಟವಾಗಿಲ್ಲ. ಘಟನೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಕರಣದ ನಾಲ್ವರು ಆರೋಪಿಗಳಾದ ರಾಜ್ ಕುಶ್ವಾಹ್, ವಿಶಾಲ್ ಚೌಹಾಣ್, ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿ ಅವರೊಂದಿಗೆ ಮೇಘಾಲಯದಿಂದ ಆಗಮಿಸಿದ್ದ 12 ಮಂದಿಯ ಪೊಲೀಸ್ ತಂಡ ಶಿಲ್ಲಾಂಗ್‍ಗೆ ತೆರಳುತ್ತಿತ್ತು ಎಂದು ಇಂಧೋರ್‌ನ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಾಜೇಶ್ ದಂಡೋತಿಯಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News