ಮಣಿಪುರ: ಭದ್ರತಾ ಪಡೆಗಳ ಶಸ್ತ್ರಾಸ್ತ್ರಗಳನ್ನು ದೋಚಿದ ಬಂದೂಕುಧಾರಿಗಳು
Update: 2025-02-09 20:59 IST
ಸಾಂದರ್ಭಿಕ ಚಿತ್ರ | PC : PTI
ಇಂಫಾಲ: ಅಜ್ಞಾತ ಬಂದೂಕುಧಾರಿಗಳು ಮಣಿಪುರದ ತೌಬಲ್ ಜಿಲ್ಲೆಯಲ್ಲಿರುವ ಇಂಡಿಯಾ ರಿಸರ್ವ್ ಬೆಟಾಲಿಯನ್‌ನ ಹೊರಠಾಣೆಯಿಂದ ಶಸ್ತ್ರಾಸ್ತ್ರಗಳನ್ನು ದೋಚಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
‘‘ಶನಿವಾರ ರಾತ್ರಿ ವಾಹನಗಳಲ್ಲಿ ಬಂದ ಬಂದೂಕುಧಾರಿಗಳು ಜಿಲ್ಲೆಯ ಕಾಕ್ಮಯೈಯಲ್ಲಿರುವ ಐಆರ್‌ಬಿ ಹೊರಠಾಣೆಯಿಂದ ಕನಿಷ್ಠ ಆರು ಎಸ್‌ಎಲ್‌ಆರ್‌ಗಳು ಮತ್ತು ಮೂರು ಎಕೆ ರೈಫಲ್‌ಗಳನ್ನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಅವರು ಹೇಳಿದರು’’ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಅವರು ಸುಮಾರು 270 ಸುತ್ತು ಮದ್ದುಗುಂಡುಗಳು ಮತ್ತು 12 ಮ್ಯಾಗಝಿನ್‌ಗಳನ್ನೂ ಅಪಹರಿಸಿದ್ದಾರೆ ಎಂದು ಅವರು ಹೇಳಿದರು.
ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ಅವುಗಳು ಈಗ ಶೋಧ ಕಾರ್ಯಾಚರಣೆ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದರು. ಘಟನೆಯ ಬಗ್ಗೆ ತನಿಖೆಗೂ ಆದೇಶ ನೀಡಲಾಗಿದೆ.