×
Ad

ಮುಸ್ಸೋರಿಯಲ್ಲಿ ಭೀಕರ ಅಗ್ನಿದುರಂತ: ಐತಿಹಾಸಿಕ ಸ್ಕೇಟಿಂಗ್ ರಿಂಕ್ ಹೋಟೆಲ್‍ ಭಸ್ಮ

Update: 2023-09-18 10:08 IST

Photo: Twitter

ಡೆಹ್ರಾಡೂನ್; ದೇಶದ ಐತಿಹಾಸಿಕ ಮರದ ಸ್ಕೇಟಿಂಗ್ ರಿಂಕ್ ಹೋಟೆಲ್‍ನಲ್ಲಿ ಭಾನುವಾರ ಸಂಭವಿಸಿದ ಭೀಕರ ಅಗ್ನಿದುರಂತ ಇಡೀ ಕಟ್ಟಡವನ್ನು ಸುಟ್ಟು ಬೂದಿ ಮಾಡಿದೆ. ಈ ಅಗ್ನಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಆದರೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಅವಘಡ ಸಂಭವಿಸಿರಬೇಕು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

"ಮುಂಜಾನೆ 5.10ರ ಸುಮಾರಿಗೆ ಅಗ್ನಿದುರಂತ ಸಂಭವಿಸಿದ ಬಗ್ಗೆ ಕರೆ ಬಂದಿತ್ತು. ಮೊದಲು ಸಣ್ಣ ಅಗ್ನಿಶಾಮಕ ವಾಹನವನ್ನು ಬೆಂಕಿ ನಂದಿಸಲು ಕಳುಹಿಸಲಾಗಿತ್ತು. ಬಳಿಕ ಎರಡು ದೊಡ್ಡ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಐದು ಗಂಟೆಗಳ ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಿಸಲಾಗಿದೆ" ಎಂದು ಅಗ್ನಿಶಾಮಕ ಅಧಿಕಾರಿ ಧೀರಜ್ ಸಿಂಗ್ ತಡಿಯಾಳ್ ಹೇಳಿದ್ದಾರೆ.

ಬೆಂಕಿ ನಂದಿಸಲು ಸುಮಾರು 50 ಲಕ್ಷ ಲೀಟರ್ ನೀರು ಸುರಿಯಲಾಯಿತು. 12 ಕೊಠಡಿ ಹಾಗೂ ಒಂದು ಹಾಲ್ ಹೊಂದಿದ್ದ ಇಡೀ ಕಟ್ಟಡ ಭಸ್ಮವಾಗಿದೆ. ಕಾರುಗಳನ್ನು ನಿಲುಗಡೆ ಮಾಡಿದ ಕಾರಣದಿಂದ ಕ್ಯಾಮರ್ ಬ್ಯಾಕ್ ಮಾರ್ಗದ ಬದಲಾಗಿ ಗ್ರೀನ್‍ಚೌಕ್ ಮೂಲಕ ಅಗ್ನಿಶಾಮಕ ವಾಹನ ಸಂಚರಿಸಬೇಕಾಯಿತು. ಆದ್ದರಿಂದ ಘಟನಾ ಸ್ಥಳಕ್ಕೆ ತಲುಪುವಲ್ಲಿ 10 ನಿಮಿಷ ವಿಳಂಬವಾಯಿತು ಎಂದು ಅವರು ವಿವರಿಸಿದ್ದಾರೆ.

ಮಸ್ಸೂರಿಯ 'ಹೋಟೆಲ್ ದ ರಿಂಕ್' ಏಷ್ಯಾದ ಅತಿದೊಡ್ಡ ಮರದ ನೆಲಹಾಸಿನ ಸ್ಕೇಟಿಂಗ್ ರಿಂಕ್ ಹೊಂದಿದ್ದು, 12 ಕೊಠಡಿಗಳಿರುವ ಇಡೀ ಕಟ್ಟಡ ಭಾನುವಾರ ಭಸ್ಮವಾಗಿದೆ. ಹೋಟೆಲ್ ಮಾಲೀಕರು ಇದೇ ಕೊಠಡಿಯಲ್ಲಿ ನಿದ್ರಿಸುತ್ತಿದ್ದರು. ಬೆಂಕಿ ಅನಾಹುತ ಗಮನಕ್ಕೆ ಬಂದ ತಕ್ಷಣ ಕಿಟಕಿ ಒಡೆದು ಸುರಕ್ಷಿತವಾಗಿ ಹೊರಕ್ಕೆ ಬಂದಿದ್ದಾರೆ ಎಮದು ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News