×
Ad

ಬಿಜೆಪಿ ಚುನಾವಣಾ ಪ್ರಚಾರದ ವೇಳೆ ನಟ ಮಿಥುನ್ ಚಕ್ರವರ್ತಿಯ ಪರ್ಸ್ ಕಳವು!

Update: 2024-11-13 11:37 IST

ಮಿಥುನ್ ಚಕ್ರವರ್ತಿ (PTI)

ರಾಂಚಿ: ಜಾರ್ಖಂಡ್‌ನಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ನಟ, ರಾಜಕಾರಣಿ ಮಿಥುನ್ ಚಕ್ರವರ್ತಿ ಅವರ ಪರ್ಸ್ ಲಪಟಾಯಿಸಿರುವ ಘಟನೆ ವರದಿಯಾಗಿದೆ.

ಜಾರ್ಖಂಡ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲು ನಟ ಮಿಥುನ್ ಚಕ್ರವರ್ತಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರ ಜೇಬಿನಿಂದ ಪರ್ಸ್ ಕಳ್ಳತನವಾಗಿದೆ, ಇದರಿಂದ ಮಿಥುನ್ ಚಕ್ರವರ್ತಿ ಒಂದು ಕ್ಷಣ ಆಘಾತಕ್ಕೊಳಗಾಗಿದ್ದಾರೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಅಗಿರುವ ವಿಡಿಯೊದಲ್ಲಿ, ಬಿಜೆಪಿ ಪಕ್ಷದ ಸದಸ್ಯರು ಮಿಥುನ್ ಚಕ್ರವರ್ತಿಯ ಪರ್ಸ್ ಅನ್ನು ಮರಳಿಸುವಂತೆ ಸಭಿಕರಿಗೆ ಮನವಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ವರದಿಗಳ ಪ್ರಕಾರ, ಬಿಜೆಪಿ ಅಭ್ಯರ್ಥಿ ಅಪರ್ಣಾ ಸೇನ್ ಗುಪ್ತ ಪರ ಪ್ರಚಾರ ನಡೆಸಲು ನಿರ್ಸಾ ವಿಧಾನಸಭಾ ಕ್ಷೇತ್ರಕ್ಕೆ ಮಿಥುನ್ ಚಕ್ರವರ್ತಿ ಆಗಮಿಸಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ನಡುವೆ, ಸೋಮವಾರ ಕೂಡಾ ಜಾರ್ಖಂಡ್‌ನ ಪೂರ್ವ ಸಿಂಗ್ಭುಮ್ ಜಿಲ್ಲೆಯಲ್ಲಿ ಮಿಥುನ್ ಚಕ್ರವರ್ತಿ ಭಾರಿ ರೋಡ್ ಶೋ ನಡೆಸಿದ್ದರು. ಅವರು ಪೋತ್ಕಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಪತ್ನಿ ಮೀರಾ ಮುಂಡಾ ಪರವಾಗಿ ಮತ ಯಾಚಿಸಿದ್ದರು.

ಈ ನಡುವೆ, ಮಿಥುನ್ ಚಕ್ರವರ್ತಿಯ ಪರ್ಸ್ ಕಳ್ಳತನದ ಕುರಿತು ಸ್ಪಷ್ಟೀಕರಣ ನೀಡಿರುವ ಬಿಜೆಪಿ, ಮಿಥುನ್ ಚಕ್ರವರ್ತಿಯ ಪರ್ಸ್ ಕಳ್ಳತನವಾಗಿರಲಿಲ್ಲ. ಬದಲಿಗೆ, ಬೇರೆಡೆ ಇಡಲಾಗಿತ್ತು. ಅದೀಗ ದೊರೆತಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News