×
Ad

ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ರಕ್ಷಿಸಿದ ಮುಹಮ್ಮದ್ ಶಮಿ; ವೀಡಿಯೊ ವೈರಲ್

Update: 2023-11-26 11:22 IST

Screemgrab: Instagram/mdshami.11

ನೈನಿತಾಲ್ (ಉತ್ತರ ಪ್ರದೇಶ): ನೈನಿತಾಲ್ ಬಳಿ ನಡೆದ ರಸ್ತೆ ಅಪಘಾತವೊಂದರ ಗಾಯಾಳುವನ್ನು ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ರಕ್ಷಿಸಿದ್ದು, ಆ ವಿಡಿಯೊವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಶಮಿ ಹಂಚಿಕೊಂಡಿರುವ ವಿಡಿಯೊದಲ್ಲಿ, ರಸ್ತೆಯಾಚೆ ಉರುಳಿ ಅಪಘಾತಕ್ಕೀಡಾದ ಕಾರಿನಲ್ಲಿದ್ದ ಗಾಯಾಳುವನ್ನು ಅವರು ರಕ್ಷಿಸುತ್ತಿರುವುದನ್ನು ನೋಡಬಹುದಾಗಿದೆ.

“ಆತ ಎಷ್ಟು ಅದೃಷ್ಟವಂತನೆಂದರೆ, ದೇವರು ಆತನಿಗೆ ಎರಡನೇ ಬಾರಿ ಬದುಕು ನೀಡಿದ್ದಾನೆ. ಆತನ ಕಾರು ನನ್ನ ಕಾರಿನ ಎದುರುಗಡೆಯೆ ನೈನಿತಾಲ್ ನ ಬೆಟ್ಟದ ರಸ್ತೆಯಿಂದ ಕೆಳಕ್ಕೆ ಉರುಳಿತು. ನಾವು ಆತನನ್ನು ಬಹಳ ಸುರಕ್ಷಿತವಾಗಿ ಕಾರಿನಿಂದ ಹೊರ ತಂದೆವು” ಎಂದು ಇನ್ಸ್ಟಾಗ್ರಾಮ್ ನಲ್ಲಿ ಶಮಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ ಕ್ರಿಕೆಟ್ ಕ್ರೀಡಾಕೂಟದಲ್ಲಿ ಮುಹಮ್ಮದ್ ಶಮಿ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದರು. ಅವರು ತಾವಾಡಿದ ಆರು ಪಂದ್ಯಗಳಿಂದ ಒಟ್ಟು 24 ವಿಕೆಟ್ ಕಿತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News