×
Ad

ಹಣ ವರ್ಗಾವಣೆ ಪ್ರಕರಣ | ಪತ್ರಕರ್ತ Mahesh Langaಗೆ Supreme Courtನಿಂದ ಮಧ್ಯಂತರ ಜಾಮೀನು

Update: 2025-12-15 15:34 IST
Photo | barandbench

ಹೊಸದಿಲ್ಲಿ: ಹಣ ವರ್ಗಾವಣೆ ಪ್ರಕರಣದಲ್ಲಿ The Hindu ಪತ್ರಿಕೆಯ ಪತ್ರಕರ್ತ Mahesh Langa ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ ಎಂದು LiveLaw ವರದಿ ಮಾಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ Justice Surya Kant, ನ್ಯಾಯಮೂರ್ತಿಗಳು Justice Joymalya Bagchi ಹಾಗೂ Justice Vipul M. Pancholi ಅವರನ್ನು ಒಳಗೊಂಡ ಪೀಠವು, ಜಾಮೀನು ಷರತ್ತಿನಂತೆ ಲಂಗಾ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಲೇಖನಗಳನ್ನು ಬರೆಯದಂತೆ ನಿರ್ಬಂಧ ವಿಧಿಸಿದೆ.

ಪ್ರಕರಣದ ವಿಚಾರಣೆಯನ್ನು ದಿನನಿತ್ಯದ ಆಧಾರದ ಮೇಲೆ ನಡೆಸಿ, ಉಳಿದಿರುವ ಒಂಭತ್ತು ಸಾಕ್ಷಿಗಳ ಹೇಳಿಕೆಗಳನ್ನು ಶೀಘ್ರ ದಾಖಲಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಬೇಕು ಹಾಗೂ ಅವರ ಜಾಮೀನು ರದ್ದುಪಡಿಸುವ ಅರ್ಜಿ ಬಾಕಿ ಇರುವ ಹಿನ್ನೆಲೆಯಲ್ಲಿ ಯಾವುದೇ ಮುಂದೂಡಿಕೆಯನ್ನು ಕೋರುವಂತಿಲ್ಲ ಎಂದು ನ್ಯಾಯಾಲಯ ಲಂಗಾಗೆ ಸೂಚಿಸಿದೆ.

“ಜಾಮೀನು ಷರತ್ತುಗಳ ಪಾಲನೆಯ ಕುರಿತು ಜಾರಿ ನಿರ್ದೇಶನಾಲಯ(ED)ವು ವರದಿಯನ್ನು ಸಲ್ಲಿಸಬೇಕು” ಎಂದು ಪೀಠ ಹೇಳಿದ್ದು, ಲಂಗಾ ಅವರ ಅರ್ಜಿಯನ್ನು 2026ರ ಜನವರಿ 6ರಂದು ಮುಂದಿನ ವಿಚಾರಣೆಗೆ ಪಟ್ಟಿ ಮಾಡಲು ಆದೇಶಿಸಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಳೆದ ವರ್ಷ ಗುಜರಾತ್ ಪೊಲೀಸರು ಲಂಗಾ ಅವರನ್ನು ಬಂಧಿಸಿದ್ದರು. ಬಳಿಕ ಇತರ ಪ್ರಕರಣಗಳಲ್ಲಿಯೂ ಆರೋಪ ದಾಖಲಾಗಿದ್ದು, ಜಾರಿ ನಿರ್ದೇಶನಾಲಯ(ED)ವು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿತ್ತು.

ಜಾಮೀನು ಅರ್ಜಿಯ ವಿಚಾರಣೆಯಲ್ಲಿ ಲಂಗಾ ಪರ ಹಿರಿಯ ವಕೀಲ Kapil Sibal ವಾದ ಮಂಡಿಸಿದರು. ಅರ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್ Tushar Mehta, “ಒಬ್ಬ ಪತ್ರಕರ್ತ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ. ನೀವು ಹಣ ಪಾವತಿಸದಿದ್ದರೆ ನಾವು ಏನನ್ನಾದರೂ ಬರೆಯುತ್ತೇವೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ಹೆಚ್ಚುವರಿ ಪ್ರತಿವಾದ ಸಲ್ಲಿಸಲು ಅವಕಾಶ ಬೇಕು” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಪಿಲ್‌ ಸಿಬಲ್, “ನಾನು ಈಗಾಗಲೇ ಪ್ರತಿವಾದಕ್ಕೆ ಉತ್ತರ ಸಲ್ಲಿಸಿದ್ದೇನೆ. ಈಗ ಹೆಚ್ಚುವರಿ ಪ್ರತಿವಾದ ಸಲ್ಲಿಸುವ ಹಕ್ಕು ಅವರಿಗೆ ಇಲ್ಲ. ಅದು 68 ಕೋಟಿ ರೂಪಾಯಿ ವಂಚನೆ ಎಂದು ಆರೋಪಿಸಲಾಗುತ್ತಿದೆ, ಆದರೆ ಅದು 68 ಲಕ್ಷವೂ ರೂಪಾಯಿಯೂ ಅಲ್ಲ” ಎಂದು ವಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News