×
Ad

ಮುಂಬೈ | ಪ್ರಧಾನಿ ಮೋದಿಗೆ ಬೆದರಿಕೆ ಕರೆ ಮಾಡಿದ್ದ ಮಹಿಳೆಯ ಬಂಧನ

Update: 2024-11-28 20:30 IST

 ಪ್ರಧಾನಿ ನರೇಂದ್ರ ಮೋದಿ | PC : PTI 

ಮುಂಬೈ : ಮುಂಬೈ ಪೋಲಿಸರಿಗೆ ದೂರವಾಣಿ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆಯನ್ನು ಒಡ್ಡಿದ್ದ ಆರೋಪದಲ್ಲಿ 34ರ ಹರೆಯದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.

ನಗರ ಪೋಲಿಸ್ ನಿಯಂತ್ರಣ ಕೊಠಡಿಯು ಬುಧವಾರ ಈ ಕರೆಯನ್ನು ಸ್ವೀಕರಿಸಿತ್ತು. ಕರೆ ಅಂಧೇರಿ (ಪಶ್ಚಿಮ)ಯ ಅಂಬೋಲಿಯಿಂದ ಬಂದಿತ್ತು ಎನ್ನುವುದನ್ನು ಪೋಲಿಸರು ಪತ್ತೆ ಹಚ್ಚಿದ್ದರು ಮತ್ತು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಮಹಿಳೆಯನ್ನು ಪತ್ತೆ ಮಾಡಿದ ಮುಂಬೈ ಪೋಲಿಸ್ ತಂಡವು ವಿಚಾರಣೆಗಾಗಿ ಆಕೆಯನ್ನು ವಶಕ್ಕೆ ತೆಗೆದುಕೊಂಡಿತ್ತು.

ವಿಚಾರಣೆಯ ಬಳಿಕ ಮಹಿಳೆ ಮಾನಸಿಕ ಅಸ್ವಸ್ಥೆ ಎನ್ನುವುದು ಕಂಡುಬಂದಿದ್ದು, ದೂರವಾಣಿ ಕರೆಯನ್ನು ‘ಕುಚೇಷ್ಟೆ’ ಎಂದು ವರ್ಗೀಕರಿಸಲಾಗಿದೆ. ಮಹಿಳೆ ಈ ಹಿಂದೆ ಯಾವುದೇ ಕ್ರಿಮಿನಲ್ ದಾಖಲೆಯನ್ನು ಹೊಂದಿಲ್ಲ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News