×
Ad

ಮುಸ್ಲಿಮರು ಶೇಕಡ 18ರಷ್ಟಿದ್ದರೂ ನಾಯಕತ್ವದ ಕೊರತೆ: ಸುಖ್ಬೀರ್ ಸಿಂಗ್ ಬಾದಲ್

Update: 2023-12-26 09:26 IST

Photo: twitter.com/ians_india

ಚಂಡೀಗಢ: ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇಕಡ 18ರಷ್ಟಿದ್ದರೂ, ಅವರು ಸಂಘಟಿತರಾಗದೇ ಇರುವುದರಿಂದ ಅವರಲ್ಲಿ ನಾಯಕತ್ವದ ಕೊರತೆ ಇದೆ. ಸಿಖ್ಖರು ಕೇವಲ ಶೇಕಡ 2ರಷ್ಟಿದ್ದರೂ, ಶ್ರೀ ಅಕಾತ್ ತಕ್ತ್ ಸಾಹೀಬ್ ಅಡಿಯಲ್ಲಿ ಸಂಘಟಿತರಾಗಿದ್ದೇವೆ ಎಂದು ಶಿರೋಮಣಿ ಅಕಾಲಿದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.

ಸಿಖ್ಖ್ ಗುಂಪುಗಳ ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿಖ್ಖ್ ಇತಿಹಾಸದ ಬಗ್ಗೆ ಸ್ವಲ್ಪವೂ ಪರಿಜ್ಞಾನ ಇಲ್ಲದ ಅವರನ್ನು ಸಿಖ್ಖ್ ಎಂದು ಪರಿಗಣಿಸುವುದಿಲ್ಲ. ತಾನು ಸಿಖ್ಖ್ ಎಂದು ತೋರಿಸಿಕೊಳ್ಳಲು ರುಮಾಲು ಧರಿಸುತ್ತಿದ್ದಾರೆ. ಸಿಕ್ಖರ ಇತಿಹಾಸದ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ಅವರನ್ನು ನೋಡಿದಾಗ ಮತ್ತು ಅವರ ಹೇಳಿಕೆಗಳನ್ನು ಕೇಳಿದಾಗ ಅಯ್ಯೋ ಎನಿಸುತ್ತದೆ ಎಂದು ಹೇಳಿದರು.

ಪಂಜಾಬ್ ಸರ್ಕಾರವನ್ನು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಾರ್ಟಿ ಮುಖಂಡ ಅರವಿಂದ ಕೇಜ್ರಿವಾಲ್ ನಡೆಸುತ್ತಿದ್ದಾರೆಯೇ ವಿನಃ ಭಗವಂತ್ ಮಾನ್ ನಡೆಸುತ್ತಿಲ್ಲ ಎಂದು ಟೀಕಿಸಿದರು.

2022ರ ಚುನಾವಣೆಯಲ್ಲಿ 117 ಸ್ಥಾನಗಳ ವಿಧಾನಸಭೆಯಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಆಮ್ ಆದ್ಮಿ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್ ಕೇವಲ 18 ಸ್ಥಾನಗಳಿಗೆ ತೃಪ್ತಿಪಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News