×
Ad

ಸ್ಮಾರ್ಟ್ ಫೋನ್ ಕೊಡಿಸಲು ನಿರಾಕರಿಸಿದ ತಾಯಿಯನ್ನು ಹತ್ಯೆಗೈದ ಪುತ್ರ

Update: 2023-10-21 13:56 IST

ಸಾಂದರ್ಭಿಕ ಚಿತ್ರ 

ನಾಗಪುರ: ಸ್ಮಾರ್ಟ್ ಫೋನ್ ಖರೀದಿಸಲು ಹಣ ನೀಡಲಿಲ್ಲವೆಂದು ತನ್ನ ತಾಯಿಯ ಕುತ್ತಿಗೆ ಹಿಚುಕಿ ಹತ್ಯೆಗೈದಿದ್ದ 28 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬುಧವಾರ ಕಮಲಾಬಾಯಿ ಬದ್ವೈಕ್ (47) ಎಂಬ ಮಹಿಳೆ ಮೃತಪಟ್ಟಿದ್ದರು. ಕುತ್ತಿಗೆ ಹಿಸುಕಿ ಹತ್ಯೆಗೈಯ್ಯಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿಯು ಬಂದ ನಂತರ ಈ ಸಂಬಂಧ ತನಿಖೆ ಪ್ರಾರಂಭಗೊಂಡಿತ್ತು ಎಂದು ಅವರು ತಿಳಿಸಿದ್ದಾರೆ.

“ತನ್ನ ಸಹೋದರ ರಾಮನಾಥ್ ತನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ ಎಂಬ ಕರೆಯನ್ನು ಮೃತ ಮಹಿಳೆಯ ಮತ್ತೊಬ್ಬ ಪುತ್ರ ದೀಪಕ್ ಸ್ವೀಕರಿಸಿದ್ದಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಆಕೆ ಮೃತಪಟ್ಟಿದ್ದಾಳೆ. ದೀಪಕ್ ತನ್ನ ತಾಯಿಯ ಮೃತದೇಹ ನೋಡಿದಾಗ ಏನೋ ತಪ್ಪು ನಡೆದಿದೆ ಎಂಬ ಸಂಶಯ ಮೂಡಿದೆ. ಇದರೊಂದಿಗೆ ಆಕೆಯ ಬಂಗಾರದ ಒಡವೆಗಳು ಕಾಣೆಯಾಗಿರುವುದೂ ಆತನ ಗಮನಕ್ಕೆ ಬಂದಿದೆ” ಎಂದು ಅವರು ಹೇಳಿದ್ದಾರೆ.

ಈ ಕುರಿತು ದೀಪಕ್ ಪೊಲೀಸರನ್ನು ಎಚ್ಚರಿಸಿದ ನಂತರ, ರಾಮನಾಥ್ ನನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಆಗ ತನಗೆ ಸ್ಮಾರ್ಟ್ ಫೋನ್ ಖರೀದಿಸಲು ತನ್ನ ತಾಯಿ ಹಣ ನೀಡದಿದ್ದರಿಂದ ಆಕೆಯನ್ನು ಹತ್ಯೆಗೈದೆ ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ” ಎಂದು ಹುಡ್ಕೇಶ್ವರ್ ಪೊಲೀಸ್ ಠಾಣೆಯ ಅಧಿಕಾರಿಯು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News