ರಾಷ್ಟ್ರೀಯ ಆರೋಗ್ಯ ಮಿಶನ್ ಯೋಜನೆ ಮತ್ತೆ 5 ವರ್ಷ ವಿಸ್ತರಣೆ
Update: 2025-01-22 20:19 IST
ರಾಷ್ಟ್ರೀಯ ಆರೋಗ್ಯ ಮಿಶನ್ ಯೋಜನೆೆ | PC : pibindia.wordpress.com
ಹೊಸದಿಲ್ಲಿ: ಮುಂದಿನ ಐದು ವರ್ಷಗಳ ಅವಧಿಗೆ ರಾಷ್ಟ್ರೀಯ ಆರೋಗ್ಯ ಮಿಶನ್ ಯೋಜನೆೆಯನ್ನು ಮುಂದುವರಿಸಲು ಕೇಂದ್ರ ಸಂಪುಟವು ಬುಧವಾರ ಅನುಮೋದಿಸಿದೆ.
ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳ ಕುರಿತು ವರದಿಗಾರರಿಗೆ ವಿವರಿಸಿದ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ಕಳೆದ ಹತ್ತು ವರ್ಷಗಳಲ್ಲಿ ಮಿಶನ್ ಐತಿಹಾಸಿಕ ಗುರಿಸಾಧಿಸಿದೆಯೆಂದು ಹೇಳಿದರು.
2021 ಹಾಗೂ 2022ರ ನಡುವೆ ರಾಷ್ಟ್ರೀಯ ಆರೋಗ್ಯ ಮಿಶನ್ (ಎನ್‌ಎಚ್‌ಎಂ) ಯೋಜನೆಗೆ ಸುಮಾರು 12 ಲಕ್ಷ ಆರೋಗ್ಯ ಪಾಲನಾ ಕಾರ್ಯಕರ್ತರು ಸೇರ್ಪಡೆಗೊಂಡಿದ್ದಾರೆ ಹಾಗೂ ಈ ಮಿಶನ್‌ನಡಿ ಭಾರತವು ಕೋವಿಡ್19 ವಿರುದ್ಧ ಹೋರಾಡಿತ್ತೆಂದು ಗೋಯಲ್ ಗಮನಸೆಳೆದರು.