ಸತತ 9ನೇ ಬಾರಿಗೆ ಬಿಜೆಡಿ ಅಧ್ಯಕ್ಷರಾಗಿ ನವೀನ್ ಪಟ್ನಾಯಕ್ ಆಯ್ಕೆ
ನವೀನ್ ಪಟ್ನಾಯಕ್ (Photo: X/@saurabhsriLive)
ಭುವನೇಶ್ವರ: ಶನಿವಾರ ಬಿಜೆಡಿಯ ಅಧ್ಯಕ್ಷರಾಗಿ ಒಡಿಶಾ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸತತ ಒಂಬತ್ತನೆ ಬಾರಿಗೆ ಆಯ್ಕೆಯಾದರು.
ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ನವೀನ್ ಪಟ್ನಾಯಕ್ ಮಾತ್ರ ಬಿಜೆಡಿ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.
ಬಿಜೆಡಿಯ ಸಾಂಸ್ಥಿಕ ಚುನಾವಣಾಧಿಕಾರಿ ಪಿ.ಕೆ.ದೇಬ್ ಅವರು ನವೀನ್ ಪಟ್ನಾಯಕ್ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ರಾಜ್ಯ ಪ್ರಧಾನ ಕಚೇರಿ ಶಂಖ ಭವನದಲ್ಲಿ ನಡೆದ ಬಿಜೆಡಿಯ ರಾಜ್ಯ ಮಂಡಳಿ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು.
ಬಿಜೆಡಿ ಪಕ್ಷದ ಅಧ್ಯಕ್ಷರಾಗಿ ನವೀನ್ ಪಟ್ನಾಯಕ್‌ರ ಅವಿರೋಧ ಆಯ್ಕೆ ಘೋಷಣೆಯಾಗುತ್ತಿದ್ದಂತೆಯೆ, ಪಕ್ಷದ ನಾಯಕರು ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.
ಬಿಜೆಡಿ ಪಕ್ಷದ ರಾಜ್ಯ ಮಂಡಳಿಯು 355 ಸದಸ್ಯರನ್ನು ಹೊಂದಿದ್ದು, ಈ ಪೈಕಿ 80 ಮಂದಿ ಸದಸ್ಯರನ್ನು ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಪಿ.ಕೆ.ದೇಬ್ ಇದೇ ವೇಳೆ ಪ್ರಕಟಿಸಿದರು.