×
Ad

ನವಿ ಮುಂಬೈ | ಗೆಳೆಯನಿಂದ ಯುವತಿಯ ಹತ್ಯೆ

Update: 2024-07-27 22:10 IST

ಸಾಂದರ್ಭಿಕ ಚಿತ್ರ

ಮುಂಬೈ : 20ರ ಹರೆಯದ ಯುವತಿಯೋರ್ವಳನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದು, ಶವವನ್ನು ನವಿಮುಂಬೈನ ಉರನ್ ರೈಲ್ವೆ ನಿಲ್ದಾಣದ ಬಳಿ ಪೊದೆಗಳಲ್ಲಿ ಎಸೆದಿದ್ದ ಘಟನೆ ಬೆಳಕಿಗೆ ಬಂದಿದ್ದು, ಆಕೆಯ ಬಾಯ್‌ ಫ್ರೆಂಡ್ ಈ ಕೃತ್ಯವನ್ನು ನಡೆಸಿದ್ದಾನೆ ಎಂದು ಶಂಕಿಸಲಾಗಿದೆ ಎಂದು ಪೋಲಿಸರು ಶನಿವಾರ ತಿಳಿಸಿದರು.

ಕೊಲೆಯಾಗಿರುವ ಯುವತಿ ಯಶಶ್ರೀ ಉರನ್ ನಿವಾಸಿಯಾಗಿದ್ದು, 25 ಕಿ.ಮೀ.ದೂರದ ಬೇಲಾಪುರಕ್ಕೆ ಕೆಲಸಕ್ಕೆ ಹೋಗುತ್ತಿದ್ದಳು.

ಯುವತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ವಿಫಲ ಪ್ರೇಮದ ಹಿನ್ನೆಲೆಯಲ್ಲಿ ಯುವತಿಯ ಕೊಲೆ ನಡೆದಿದೆ ಎಂದು ಆರಂಭಿಕ ತನಿಖೆಗಳು ತೋರಿಸಿವೆ. ಯುವತಿಯ ಬಾಯ್‌ಫ್ರೆಂಡ್ ಕೂಡ ಆಕೆಯೊಂದಿಗೆ ನಾಪತ್ತೆಯಾಗಿದ್ದು,ಆತನನ್ನು ಇನ್ನಷ್ಟೇ ಹುಡುಕಬೇಕಿದೆ. ಆತ ಪ್ರಮುಖ ಶಂಕಿತನಾಗಿದ್ದಾನೆ. ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಶಂಕಿತನ ಪತ್ತೆಗಾಗಿ ಐದು ಪೋಲಿಸ್ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News