×
Ad

ಜುಲೈ 3ನೇ ವಾರ ನಾಲ್ಕು ಸುತ್ತುಗಳ ನೀಟ್-ಯುಜಿ ಕೌನ್ಸಿಲಿಂಗ್: ಕೇಂದ್ರ ಸರ್ಕಾರ

Update: 2024-07-11 13:40 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ವಿವಾದಗಳ ಸುಳಿಯಲ್ಲಿ ಸಿಲುಕಿರುವ ನೀಟ್-ಯುಜಿ 2024ರ ನಾಲ್ಕು ದಿನಗಳ ಕೌನ್ಸಿಲಿಂಗ್ ಪ್ರಕ್ರಿಯೆ ಜುಲೈ ಮೂರನೇ ವಾರ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂಕೋರ್ಟ್‍ಗೆ ತಿಳಿಸಿದೆ.

ಪರೀಕ್ಷಾ ಅಕ್ರಮದಲ್ಲಿ ಫಲಾನುಭವಿಗಳು ಎಂದು ಕಂಡುಬಂದಲ್ಲಿ ಅಂಥ ಅಭ್ಯರ್ಥಿಗಳ ಅರ್ಹತೆಯನ್ನು ಕೌನ್ಸಿಲಿಂಗ್ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ರದ್ದುಪಡಿಸಲಾಗುವುದು ಎಂದು ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ಸಲ್ಲಿಸಿದ 44 ಪುಟಗಳ ಅಫಿಡವಿಟ್‍ನಲ್ಲಿ ಸ್ಪಷ್ಟಪಡಿಸಿದೆ.

ಐಐಟಿ ಮದ್ರಾಸ್ ವರದಿ

ನೀಟ್ ಯುಜಿ ಪರೀಕ್ಷೆಯಲ್ಲಿ ಸಾಮೂಹಿಕ ಅಕ್ರಮ ನಡೆದಿಲ್ಲ ಅಥವಾ ಸ್ಥಳೀಯ ಅಭ್ಯರ್ಥಿಗಳು ಅಸಹಜವಾಗಿ ಹೆಚ್ಚಿನ ಅಂಕಗಳನ್ನು ಪಡೆದಿಲ್ಲ ಎನ್ನುವ ಅಂಶ ಫಲಿತಾಂಶದ ಬಗ್ಗೆ ಮದ್ರಾಸ್ ಐಐಟಿ ನಡೆಸಿದ ಡಾಟಾ ಅನಾಲಿಸ್ಟಿಕ್ಸ್‍ನಿಂದ ದೃಢಪಟ್ಟಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಬುಧವಾರ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News