×
Ad

ಚಂದ್ರನ ಮೇಲೆ ಪ್ರಥಮ ಬಾರಿಗೆ ಲ್ಯಾಂಡರ್‌ ವಿಕ್ರಮ್‌ ಚಿತ್ರ ಕ್ಲಿಕ್ಕಿಸಿದ ಪ್ರಜ್ಞಾನ್‌ ರೋವರ್‌

Update: 2023-08-30 17:31 IST

Photo: X/@isro

ಹೊಸದಿಲ್ಲಿ: ಚಂದ್ರಯಾನ-3 ಇದರ ರೋವರ್‌ ಪ್ರಜ್ಞಾನ್‌ ಇಂದು ಲ್ಯಾಂಡರ್‌ ವಿಕ್ರಮ್‌ ಫೋಟೋವನ್ನು ತನ್ನ ನ್ಯಾವಿಗೇಶನ್‌ ಕ್ಯಾಮೆರಾ ಬಳಸಿ ಮೊದಲ ಬಾರಿ ಕ್ಲಿಕ್ಕಿಸಿ ಕಳುಹಿಸಿದೆ. ಚಂದ್ರನ ಅಂಗಳಕ್ಕೆ ಕಾಲಿರಿಸಿದ ನಂತರ ರೋವರ್‌ ಕ್ಲಿಕ್ಕಿಸಿದ ಮೊದಲ ಚಿತ್ರ ಇದಾಗಿದೆ. ಇಷ್ಟರ ತನಕ ನಾಸಾ ಬಿಡುಗಡೆಗೊಳಿಸಿದ ಎಲ್ಲಾ ಫೋಟೋಗಳು ಮತ್ತು ವೀಡಿಯೋಗಳನ್ನು ವಿಕ್ರಮ್‌ ಸೆರೆಹಿಡಿದಿತ್ತು.

ರೋವರ್‌ ಪ್ರಜ್ಞಾನ್‌ ತೆಗೆದ ಛಾಯಾಚಿತ್ರವನ್ನು ಇಸ್ರೋ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಹಂಚಿಕೊಂಡು ಅದಕ್ಕೆ “ಇಮೇಜ್‌ ಆಫ್‌ ದಿ ಮಿಷನ್”‌ ಎಂಬ ಶೀರ್ಷಿಕೆ ನೀಡಿದೆ.

ರೋವರ್‌ನಲ್ಲಿರುವ ನೇವ್‌ಕ್ಯಾಮ್ಸ್‌ ಅನ್ನು ಬೆಂಗಳೂರಿನ ಲ್ಯಾಬೊರೇಟರಿ ಆಫ್‌ ಎಲೆಕ್ಟ್ರೋ-ಆಪ್ಟಿಕ್ಸ್‌ ಸಿಸ್ಟಮ್ಸ್‌ ಅಭಿವೃದ್ಧಿಪಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News