×
Ad

ಬಿಜೆಪಿಯ ಅಂಗ ಸಂಸ್ಥೆಗಳಿಂದ ಕಿರುಕುಳ: ಕಾಮೆಡಿಯನ್ ನಳಿನ್ ಯಾದವ್ ಆರೋಪ

Update: 2024-05-28 23:51 IST

Photo | Instagram @nalinsaaheb

ಇಂದೋರ್: ಆಡಳಿತಾರೂಢ ಬಿಜೆಪಿಯ ಅಂಗ ಸಂಸ್ಥಗಳು ತನಗೆ ಹಾಗೂ ತನ್ನ ಸಹೋದರನಿಗೆ ಕಳೆದ ಮೂರು ವರ್ಷಗಳಿಂದ ಕಿರುಕುಳ ನೀಡುತ್ತಿವೆ ಎಂದು ಮಧ್ಯಪ್ರದೇಶದ ಕಮೆಡಿಯನ್ ನಳಿನ್ ಯಾದವ್ ಅವರು ಆರೋಪಿಸಿದ್ದಾರೆ.

ಆದರೆ, ಬಿಜೆಪಿ ಈ ಆರೋಪವನ್ನು ಮಂಗಳವಾರ ತಿರಸ್ಕರಿಸಿದೆ. ಅಲ್ಲದೆ, ಇದು ಅಗ್ಗದ ಜನಪ್ರಿಯತೆ ಪಡೆಯಲು 28 ವರ್ಷದ ಕಾಮೆಡಿಯನ್ ಮಾಡುತ್ತಿರುವ ತಂತ್ರ ಎಂದು ಹೇಳಿದೆ.

ಇಲ್ಲಿಂದ 40 ಕಿ.ಮೀ. ದೂರದಲ್ಲಿರುವ ಪಿತಾಂಪುರ್ನಲ್ಲಿ ವ್ಯಕ್ತಿಯೋರ್ವರೊಂದಿಗಿನ ವಿವಾದದ ಕುರಿತಂತೆ ಕಳೆದ ತಿಂಗಳು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಆಡಳಿತ ತನ್ನ ವಿರುದ್ಧ ನೋಟಿಸು ಜಾರಿ ಮಾಡಿದ ಬಳಿಕ ಯಾದವ್ ಅವರು ಈ ಆರೋಪ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News