×
Ad

NIRF 2025 | ಸತತ ಏಳನೇ ವರ್ಷ ಐಐಟಿ ಮದ್ರಾಸ್ ನಂ.1

10ನೇ ಸಲವೂ ಐಐಎಸ್‌ಸಿ ಅತ್ಯುತ್ತಮ ವಿವಿ

Update: 2025-09-04 21:48 IST

PC : acr.iitm.ac.in

ಹೊಸದಿಲ್ಲಿ,ಸೆ.4: ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ್‍ಯಾಂಕಿಂಗ್ ಫ್ರೇಮ್‌ವರ್ಕ್(NIRF) 2025ರಲ್ಲಿ ಸತತ ಏಳನೇ ವರ್ಷವೂ ಐಐಟಿ ಮದ್ರಾಸ್ ‘ಒಟ್ಟಾರೆ’ ವಿಭಾಗದಲ್ಲಿ ತನ್ನ ಅಗ್ರಶ್ರೇಯಾಂಕವನ್ನು ಉಳಿಸಿಕೊಂಡಿದ್ದು,ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯು ಸತತ 10ನೇ ವರ್ಷವೂ ಅತ್ಯುತ್ತಮ ವಿವಿಯಾಗಿ ಹೊರಹೊಮ್ಮಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಗುರುವಾರ ಶ್ರೇಯಾಂಕಗಳ 10ನೇ ಆವೃತ್ತಿಯನ್ನು ಪ್ರಕಟಿಸಿದರು.

‘ಒಟ್ಟಾರೆ’ವರ್ಗದಲ್ಲಿ ಐಐಎಸ್‌ಸಿ ಬೆಂಗಳೂರು, ಐಐಟಿ ಬಾಂಬೆ ಮತ್ತು ಐಐಟಿ ದಿಲ್ಲಿ ಅನುಕ್ರಮವಾಗಿ 2,3 ಮತ್ತು 4ನೇ ಸ್ಥಾನವನ್ನು ಉಳಿಸಿಕೊಂಡಿವೆ.

ವಿವಿಧ ವರ್ಗಗಳಲ್ಲಿ ಅಗ್ರ ಶ್ರೇಯಾಂಕಗಳು ವಿವಿಗಳು:


1.ಐಐಎಸ್‌ಸಿ ಬೆಂಗಳೂರು

2.ಜೆಎನ್‌ಯು ದಿಲ್ಲಿ

3.ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಎಜ್ಯುಕೇಷನ್(ಮಾಹೆ)

4.ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ದಿಲ್ಲಿ

ಕಾಲೇಜುಗಳ ವಿಭಾಗ

1.ಹಿಂದು ಕಾಲೇಜ್ (ದಿಲ್ಲಿ ವಿವಿ)

2.ಮಿರಾಂಡಾ ಹೌಸ್ (ದಿಲ್ಲಿ ವಿವಿ)

3.ಹನ್ಸರಾಜ್ ಕಾಲೇಜ್

4.ಕಿರೋರಿಮಲ್ ಕಾಲೇಜ್

5.ಸೈಂಟ್ ಸ್ಟೀಫನ್ಸ್ ಕಾಲೇಜ್

ಇಂಜಿನಿಯರಿಂಗ್ ಕಾಲೇಜುಗಳು

1.ಐಐಟಿ ಮದ್ರಾಸ್

2.ಐಐಟಿ ದಿಲ್ಲಿ

3.ಐಐಟಿ ಬಾಂಬೆ

ಮ್ಯಾನೇಜ್‌ ಮೆಂಟ್ ಕಾಲೇಜುಗಳು

1.ಐಐಎಂ ಅಹ್ಮದಾಬಾದ್

2.ಐಐಎಂ ಬೆಂಗಳೂರು

3.ಐಐಎಂ ಕೋಝಿಕೋಡ್

ಫಾರ್ಮಸಿ

1. ಜಾಮಿಯಾ ಹಮ್‌ದರ್ದ್

2. ಬಿಐಟಿಎಸ್ ಪಿಲಾನಿ

ಕಾನೂನು

1.ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿವಿ ಬೆಂಗಳೂರು

2.ನ್ಯಾಷನಲ್ ಲಾ ವಿವಿ,ದಿಲ್ಲಿ

3.ಎನ್‌ಎಎಲ್‌ಎಸ್‌ಎಆರ್ ಕಾನೂನು ವಿವಿ, ಹೈದರಾಬಾದ್

ಮೆಡಿಕಲ್ ಕಾಲೇಜುಗಳು

1.ಏಮ್ಸ್ ದಿಲ್ಲಿ

2.ಪಿಜಿಐಎಂಇಆರ್ ಚಂಡೀಗಡ

3.ಸಿಎಂಸಿ ವೆಲ್ಲೂರು

ಡೆಂಟಲ್ ಕಾಲೇಜುಗಳು

1.ಏಮ್ಸ್ ದಿಲ್ಲಿ

2.ಸವಿತಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಆ್ಯಂಡ್ ಟೆಕ್ನಿಕಲ್ ಸೈನ್ಸಸ್,ಚೆನ್ನೈ

ಸಂಶೋಧನಾ ಸಂಸ್ಥೆ

1.ಐಐಎಸ್‌ಸಿ ಬೆಂಗಳೂರು

2.ಐಐಟಿ ಮದ್ರಾಸ್

ಮುಕ್ತ ವಿವಿಗಳು

1.ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯುನಿವರ್ಸಿಟಿ(ಇಗ್ನೋ)

2.ಕರ್ನಾಟಕ ರಾಜ್ಯ ಮುಕ್ತ ವಿವಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News