×
Ad

ರೈಲುಗಳಲ್ಲಿ ಹಲಾಲ್ ಪ್ರಮಾಣೀಕೃತ ಆಹಾರ ನೀಡಬೇಕೆಂಬ ನಿಬಂಧನೆ ಇಲ್ಲ : ರೈಲ್ವೆ ಮಂಡಳಿ ಸ್ಪಷ್ಟನೆ

Update: 2025-11-27 15:08 IST

ಸಾಂದರ್ಭಿಕ ಚಿತ್ರ | NDTV

ಹೊಸದಿಲ್ಲಿ: ರೈಲುಗಳಲ್ಲಿ ಹಲಾಲ್ ಪ್ರಮಾಣೀಕೃತ ಆಹಾರ ಪೂರೈಕೆಯ ಕುರಿತು ಭುಗಿಲೆದ್ದ ವಿವಾದಕ್ಕೆ ತೆರೆ ಎಳೆದಿರುವ ಭಾರತೀಯ ರೈಲ್ವೆ ಮಂಡಳಿಯು, ರೈಲುಗಳಲ್ಲಿ ಹಲಾಲ್ ಪ್ರಮಾಣೀಕೃತ ಆಹಾರ ನೀಡಬೇಕು ಎನ್ನುವ ಯಾವುದೇ ನಿಬಂಧನೆ ಇಲ್ಲ ಎಂದು ಹೇಳಿದೆ.

ಹಲಾಲ್ ಮಾಂಸ ನೀಡುತ್ತಿರುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ ಎಂಬ ದೂರಿನ ಆಧಾರದ ಮೇಲೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ನೀಡಿದ ನೋಟಿಸ್‌ಗೆ ಬುಧವಾರ ಮಂಡಳಿ ಈ ಉತ್ತರ ನೀಡಿದೆ.

ಮಾಂಸಾಹಾರ ಊಟಗಳಲ್ಲಿ ಕೇವಲ ಹಲಾಲ್ ಸಂಸ್ಕರಿಸಿದ ಮಾಂಸವನ್ನೇ ಪೂರೈಸಲಾಗುತ್ತಿದೆ ಎಂಬ ದೂರಿನ ಆಧಾರದಲ್ಲಿ, ರೈಲ್ವೆಯಿಂದ ಮಾನವ ಹಕ್ಕು ಉಲ್ಲಂಘನೆಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು, “ಐಆರ್‌ಸಿಟಿಸಿ ಮತ್ತು ರೈಲ್ವೆ FSSAI ಮಾರ್ಗಸೂಚಿಗಳನ್ನು ಮಾತ್ರ ಅನುಸರಿಸುತ್ತವೆ. ಹಲಾಲ್ ಪ್ರಮಾಣೀಕೃತ ಆಹಾರ ಪೂರೈಸುವಂತೆ ಯಾವುದೇ ಅಧಿಕೃತ ನಿರ್ದೇಶನ ಇಲ್ಲ” ಎಂದರು.

ಈ ಕುರಿತ ಪ್ರಶ್ನೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಅರ್ಜಿಯ ವಿಚಾರಣೆಯಲ್ಲೂ ಎದುರಾಗಿತ್ತು. ಮುಖ್ಯ ಮಾಹಿತಿ ಆಯೋಗದ ಮುಂದೆ ರೈಲ್ವೆ ಮಂಡಳಿಯು ಇದೇ ನಿಲುವನ್ನು ತಿಳಿಸಿದರೂ, ಹಲಾಲ್ ಪ್ರಮಾಣೀಕೃತ ಆಹಾರಕ್ಕೆ ಸಂಬಂಧಿಸಿದ ನೀತಿ, ಅನುಮೋದನೆ ಪ್ರಕ್ರಿಯೆ ಅಥವಾ ಪ್ರಯಾಣಿಕರ ಒಪ್ಪಿಗೆ ದಾಖಲಾತಿಗಳು ಐಆರ್‌ಸಿಟಿಸಿ ಬಳಿ ಇಲ್ಲವೆಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿತ್ತು.

“ರೈಲುಗಳಲ್ಲಿ ಪ್ರಯಾಣಿಕರಿಗೆ ನೀಡುವ ಆಹಾರ FSSAI ಮಾನದಂಡಗಳಿಗೆ ಅನುಗುಣವಾಗಿರುತ್ತದೆ. ಅವುಗಳ ಹೊರತಾಗಿ ಯಾವುದೇ ವಿಶೇಷ ಪ್ರಮಾಣೀಕರಣ ಆಧರಿಸುವ ಪದ್ಧತಿ ನಮ್ಮಲ್ಲಿ ಇಲ್ಲ” ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News