×
Ad

ಕೋಮು ಘರ್ಷಣೆ ವೇಳೆ ರಜೆಯಲ್ಲಿದ್ದ ನುಯ್ ಪೊಲೀಸ್ ವರಿಷ್ಠಾಕಾರಿ ವರುಣ್ ಸಿಂಗ್ಲಾ ವರ್ಗಾವಣೆ

Update: 2023-08-04 11:59 IST

Screengrab: Twitter/@PTI_News

ಚಂಡೀಗಢ: ಜಿಲ್ಲೆಯಲ್ಲಿ ಕೋಮು ಘರ್ಷಣೆ ನಡೆದಾಗ ರಜೆಯಲ್ಲಿದ್ದ ನುಹ್ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಸಿಂಗ್ಲಾ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಶುಕ್ರವಾರ ಅಧಿಕೃತ ಆದೇಶ ತಿಳಿಸಿದೆ.

ಸಿಂಗ್ಲಾ ಅವರನ್ನು ಭಿವಾನಿ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಮಾಡಲಾಗಿದೆ ಎಂದು ಆದೇಶ ತಿಳಿಸಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಟಿವಿಎಸ್ ಎನ್ ಪ್ರಸಾದ್ ಅವರು ಆಗಸ್ಟ್ 3 ರಂದು ಹೊರಡಿಸಿದ ಸರಕಾರಿ ಆದೇಶದ ಪ್ರಕಾರ, ಸಿಂಗ್ಲಾ ಅವರ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಉಸ್ತುವಾರಿ ವಹಿಸಿದ್ದ ನರೇಂದ್ರ ಬಿಜರ್ನಿಯಾ ಅವರು ನುಹ್  ನ ಹೊಸ ಎಸ್ ಪಿಯಾಗಲಿದ್ದಾರೆ.

ಪ್ರಸ್ತುತ ನುಹ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಿ ಭಿವಾನಿ ಎಸ್ಪಿಯಾಗಿ ನಿಯೋಜಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಭಿವಾನಿಯ ಎಸ್ಪಿಯಾಗಿದ್ದ ಬಿಜರ್ನಿಯಾ ಅವರನ್ನು ವರ್ಗಾವಣೆ ಮಾಡಿ ನುಯ್ ಎಸ್ಪಿಯಾಗಿ ನಿಯೋಜಿಸಲಾಗಿದೆ.

ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯುವ ಪ್ರಯತ್ನಕ್ಕೆ ಸಂಬಂಧಿಸಿದಂತೆ ನುಹ್ ನಲ್ಲಿ ಭುಗಿಲೆದ್ದ ಘರ್ಷಣೆಯಲ್ಲಿ ಇಬ್ಬರು ಗೃಹ ರಕ್ಷಕರು ಹಾಗೂ ಧರ್ಮಗುರು ಸೇರಿದಂತೆ ಆರು ಜನರು ಸಾವನ್ನಪ್ಪಿದರು. ಘರ್ಷಣೆಯು ಕಳೆದ ಕೆಲವು ದಿನಗಳಲ್ಲಿ ಗುರುಗ್ರಾಮ್ಗೆ ಹರಡಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News