×
Ad

ವೆಸ್ಟ್‌ಇಂಡೀಸ್ ವಿರುದ್ಧ ಏಕದಿನ, ಟಿ20 ಸರಣಿ | ಪಾಕಿಸ್ತಾನ ತಂಡಕ್ಕೆ ಶಾಹೀನ್ ಶಾ ಅಫ್ರಿದಿ ಪುನರಾಗಮನ

Update: 2025-07-25 21:07 IST

ಶಾಹೀನ್ ಶಾ ಅಫ್ರಿದಿ | PC : PTI 

ಕರಾಚಿ,ಜು.25: ವೆಸ್ಟ್‌ಇಂಡೀಸ್ ವಿರುದ್ಧದ ಮುಂಬರುವ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಶಾಹೀನ್ ಶಾ ಅಫ್ರಿದಿ ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇತ್ತೀಚೆಗೆ ದೇಶಿಯ ಹಾಗೂ ಟಿ20 ಪಂದ್ಯಗಳಲ್ಲಿ ಗಮನ ಸೆಳೆದಿರುವ 22ರ ಹರೆಯದ ಹಸನ್ ನವಾಝ್ ಇದೇ ಮೊದಲ ಬಾರಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಏಕದಿನ ತಂಡಕ್ಕೆ ಬಾಬರ್ ಆಝಮ್ ಹಾಗೂ ಮುಹಮ್ಮದ್ ರಿಝ್ವಾನ್ ವಾಪಸಾಗಿದ್ದಾರೆ. ಹಸನ್ ಅಲಿ ಎರಡೂ ತಂಡಗಳಿಗೆ ಮರಳಿದ್ದಾರೆ. 2023ರ ವಿಶ್ವಕಪ್ ನಂತರ ಹಸನ್ ಏಕದಿನ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ.

ಬಾಂಗ್ಲಾದೇಶ ವಿರುದ್ಧ ತನ್ನ ಸರಣಿ ಕೊನೆಗೊಂಡ ನಂತರ ಪಾಕಿಸ್ತಾನ ತಂಡವು ಜುಲೈ 27ಕ್ಕೆ ಅಮೆರಿಕಕ್ಕೆ ತಲುಪಲಿದೆ.

*ಪಾಕಿಸ್ತಾನ ಏಕದಿನ ತಂಡ:ಮುಹಮ್ಮದ್ ರಿಝ್ವಾನ್(ನಾಯಕ),ಸಲ್ಮಾನ್ ಅಲಿ,ಅಬ್ದುಲ್ಲಾ ಶಫೀಕ್,ಅಬ್ರಾರ್ ಅಹ್ಮದ್, ಬಾಬರ್ ಆಝಮ್,ಫಹೀಂ ಅಶ್ರಫ್, ಫಖರ್ ಝಮಾನ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಮುಹಮ್ಮದ್ ಹಾರಿಸ್, ಮುಹಮ್ಮದ್ ನವಾಝ್, ನಸೀಮ್ ಶಾ, ಸಯೀಮ್ ಅಯ್ಯೂಬ್, ಶಾಹೀನ್ ಅಫ್ರಿದಿ, ಸುಫ್ಯಾನ್ ಮೋಕಿಮ್

*ಪಾಕಿಸ್ತಾನ ಟಿ20 ತಂಡ: ಸಲ್ಮಾನ್ ಅಲಿ(ನಾಯಕ), ಅಬ್ರಾರ್ ಅಹ್ಮದ್, ಫಹೀಂ ಅಶ್ರಫ್, ಫಖರ್ ಝಮಾನ್, ಹಾರಿಸ್ ರವೂಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್‌ದಿಲ್ ಶಾ, ಮುಹಮ್ಮದ್ ಹಾರಿಸ್, ಮುಹಮ್ಮದ್ ನವಾಝ್, ಸಾಹಿಬ್‌ಝದಾ ಫರ್ಹಾನ್, ಸಯೀಮ್ ಅಯ್ಯೂಬ್, ಶಾಹೀನ್ ಅಫ್ರಿದಿ, ಸುಫ್ಯಾನ್ ಮೋಕಿಮ್ .

ವೆಸ್ಟ್‌ಇಂಡೀಸ್ ವಿರುದ್ಧ ಸರಣಿ ವೇಳಾಪಟ್ಟಿ

*ಟಿ20 ಸರಣಿ-ಸೆಂಟ್ರಲ್ ಬ್ರೋವರ್ಡ್ ಪಾರ್ಕ್, ಲಾಡರ್‌ಹಿಲ್, ಅಮೆರಿಕ

ಜುಲೈ 31 , ಆಗಸ್ಟ್ 2, ಆಗಸ್ಟ್ 3

*ಏಕದಿನ ಸರಣಿ-ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡಮಿ, ಟ್ರಿನಿಡಾಡ್, ಟೊಬಾಗೊ

ಆಗಸ್ಟ್ 8, ಆಗಸ್ಟ್ 10, ಆಗಸ್ಟ್ 12

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News