×
Ad

ಪಾಂಡಿಯನ್ ಅತ್ಯುತ್ತಮ ಕೆಲಸ ಮಾಡಿದ್ದರೂ ಟೀಕಿಸುತ್ತಿರುವುದು ದುರದೃಷ್ಟಕರ : ನವೀನ್ ಪಟ್ನಾಯಕ್

Update: 2024-06-08 21:02 IST

ನವೀನ್ ಪಟ್ನಾಯಕ್, ಪಾಂಡಿಯನ್ | Credit: X/@CMO_Odisha


ಭುವನೇಶ್ವರ : ಒಡಿಶಾ ವಿಧಾನಸಭಾ ಚುನಾವಣೆಯಲ್ಲಿನ ತಮ್ಮ ಪಕ್ಷದ ಸೋಲಿಗೆ ತಮ್ಮ ಆಪ್ತ ವಿ.ಕೆ.ಪಾಂಡಿಯನ್ ಅನ್ನು ಟೀಕಿಸುತ್ತಿರುವುದು ದುರದೃಷ್ಟಕರ. ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಬಿಜೆಡಿ ವರಿಷ್ಠ ನವೀನ್ ಪಟ್ನಾಯಕ್ ಸಮರ್ಥಿಸಿಕೊಂಡಿದ್ದಾರೆ.

ಇದೇ ವೇಳೆ, ತಮಿಳುನಾಡು ಮೂಲದ, ರಾಜಕಾರಣಿಯಾಗಿ ಬದಲಾಗಿರುವ ಅಧಿಕಾರಿ ಪಾಂಡಿಯನ್ ತಮ್ಮ ಉತ್ತರಾಧಿಕಾರಿಯಲ್ಲ ಎಂದು ಒಡಿಶಾದ ಐದು ಬಾರಿ ಮುಖ್ಯಮಂತ್ರಿಯಾದ ನವೀನ್ ಪಟ್ನಾಯಕ್ ಪುನರುಚ್ಚರಿಸಿದ್ದಾರೆ. ನನ್ನ ಉತ್ತರಾಧಿಕಾರಿ ಯಾರಾಗಬೇಕೆಂಬುದನ್ನು ಒಡಿಶಾದ ಜನರೇ ನಿರ್ಧರಿಸಲಿದ್ದಾರೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಅನುಭವಿಸಿರುವ ಪರಾಭವವನ್ನು ವಿನೀತವಾಗಿ ಒಪ್ಪಿಕೊಂಡಿದ್ದೇನೆ ಎಂದು ಹೇಳಿರುವ ಪಟ್ನಾಯಕ್, ರಾಜ್ಯದ ಸೇವೆಯನ್ನು ಯಾವೆಲ್ಲ ಮಾರ್ಗದಿಂದ ಸಾಧ್ಯವೊ ಅವೆಲ್ಲ ಮಾರ್ಗಗಳ ಮೂಲಕ ಮಾಡಲಿದ್ದೇನೆ ಎಂದು ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News