×
Ad

ಕೇವಲ ಸಂದೇಹದಲ್ಲಿ ಪೌರತ್ವ ಸಾಬೀತುಪಡಿಸಲು ಅಧಿಕಾರಿಗಳು ಕೇಳುವಂತಿಲ್ಲ: ಸುಪ್ರೀಂ ಕೋರ್ಟ್

Update: 2024-07-12 22:15 IST

ಸುಪ್ರೀಂ ಕೋರ್ಟ್ | PC : PTI 

ಹೊಸದಿಲ್ಲಿ: ಅನುಮಾನವನ್ನು ರುಜುವಾತುಪಡಿಸುವ ಯಾವುದೇ ಪುರಾವೆ ಇಲ್ಲದೆ ಅಧಿಕಾರಿಗಳು ವ್ಯಕ್ತಿಯನ್ನು ವಿದೇಶಿ ಎಂದು ಆರೋಪಿಸುವಂತಿಲ್ಲ ಹಾಗೂ ಆತನ ಪೌರತ್ವದ ಕುರಿತು ತನಿಖೆ ಆರಂಭಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ನ್ಯಾಯಮೂರ್ತಿ ವಿಕ್ರಮ್‌ನಾಥ್ ಹಾಗೂ ಏಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠ, ವಿದೇಶಿಗ ಎಂದು ಆರೋಪಕ್ಕೆ ಒಳಗಾದ ವ್ಯಕ್ತಿಯು ತನ್ನ ಪೌರತ್ವವನ್ನು ಸಾಬೀತುಪಡಿಸಲು ತಾನೇ ಪುರಾವೆಯನ್ನು ಒದಗಿಸಬೇಕು ಎಂದು ವಿದೇಶಿಗರ ಕಾಯ್ದೆಯ ಸೆಕ್ಷನ್ 9 ಹೇಳುತ್ತದೆ. ಆದರೂ ಸಂದೇಹದ ಆಧಾರದಲ್ಲಿ ಪೌರತ್ವದ ಪುರಾವೆಯನ್ನು ಕೇಳುವಂತಿಲ್ಲ ಎಂದು ಹೇಳಿದೆ.

ಮುಹಮ್ಮದ್ ರಹೀಮ್ ಆಲಿ ಹೆಸರಿನ ವ್ಯಕ್ತಿ ವಿದೇಶಿಗ ಎಂದು ಘೋಷಿಸಿ ಅಸ್ಸಾಂನ ನಲ್ಬರಿಯ ವಿದೇಶಿಗರ ನ್ಯಾಯಾಧೀಕರಣದ 2012ರ ತೀರ್ಪನ್ನು ಎತ್ತಿ ಹಿಡಿದು ಗುವಾಹಟಿ ಉಚ್ಚ ನ್ಯಾಯಾಲಯ 2015ರಲ್ಲಿ ನೀಡಿದ ತೀರ್ಪನ್ನು ತಿರಸ್ಕರಿಸಿದ ಸಂದರ್ಭ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News