ʼವಂದೇ ಮಾತರಂʼ ವಿರೋಧಿಸುವುದು ಭಾರತ ಮಾತೆಯನ್ನು ವಿರೋಧಿಸಿದಂತೆ: ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್
ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ (Photo: PTI)
ಬಾರಾಬಂಕಿ (ಉತ್ತರ ಪ್ರದೇಶ): “ವಂದೇಮಾತರಂ ಅನ್ನು ವಿರೋಧಿಸುತ್ತಿರುವವರು ಭಾರತ ಮಾತೆಯನ್ನು ವಿರೋಧಿಸುತ್ತಿದಂತೆ” ಎಂದು ಮಂಗಳವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಇಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಆದಿತ್ಯನಾಥ್, “ವಂದೇಮಾತರಂ ಗೀತೆ ಯಾವುದೇ ಬಗೆಯ ಪೂಜೆಯೊಂದಿಗೆ ಸಂಬಂಧ ಹೊಂದಿಲ್ಲ. ಅದು ಕೇವಲ ಭಾರತ ಮಾತೆಯೆಡೆಗಿನ ಗೌರವವಾಗಿದೆ” ಎಂದು ಹೇಳಿದ್ದಾರೆ.
“ಯಾರು ವಂದೇಮಾತರಂ ಅನ್ನು ವಿರೋಧಿಸುತ್ತಿದ್ದಾರೆಯೊ, ಅಂಥವರು ಭಾರತ ಮಾತೆಯನ್ನು ವಿರೋಧಿಸುತ್ತಿದ್ದಾರೆ. ವಂದೇಮಾತರಂ ಯಾವುದೇ ವ್ಯಕ್ತಿ, ಜಾತಿ ಅಥವಾ ಪ್ರಾಂತ್ಯಕ್ಕೆ ಸೇರಿದ್ದಲ್ಲ” ಎಂದು ಅವರು ತಿಳಿಸಿದ್ದಾರೆ.
“ವಂದೇಮಾತರಂ ಗೀತೆಯು ಯಾವುದೇ ವ್ಯಕ್ತಿ ಅಥವಾ ಯಾವುದೇ ಬಗೆಯ ಪೂಜೆಯೊಂದಿಗೆ ಸಂಬಂಧ ಹೊಂದಿಲ್ಲ. ವಾಸ್ತವವಾಗಿ ಅದು ಭಾರತ ಮಾತೆಯೆಡೆಗಿನ ಗೌರವವಾಗಿದೆ” ಎಂದೂ ಅವರು ಹೇಳಿದ್ದಾರೆ.
“ದೇವತೆಗಳಾದ ಸರಸ್ವತಿ, ಲಕ್ಷ್ಮಿ ಹಾಗೂ ದುರ್ಗೆಯನ್ನು ಪೂಜಿಸುವ ಮೂಲಕ, ನಾವು ಭಾರತ ಮತ್ತು ಭಾರತೀಯತೆಯನ್ನು ಮುನ್ನಡೆಸುವ ಸಾಮರ್ಥ್ಯ ಪಡೆದಿದ್ದೇವೆ” ಎಂದು ಅವರು ಹೇಳಿದ್ದಾರೆ.