×
Ad

ರಾಜ್ಯಸಭಾ ಸ್ಪೀಕರ್ ಜಗದೀಪ್‌ ಧನ್ಕರ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದ INDIA ಮೈತ್ರಿಕೂಟ

Update: 2024-12-09 17:41 IST

ರಾಜ್ಯಸಭಾ ಸಭಾಪತಿ ಜಗದೀಪ್‌ ಧನ್ಕರ್‌ (PTI)

ಹೊಸದಿಲ್ಲಿ: ಭಾರತದ ಸಂವಿಧಾನದ 67(ಬಿ) ವಿಧಿಯಡಿಯಲ್ಲಿ ರಾಜ್ಯಸಭಾ ಸ್ಪೀಕರ್ ಮತ್ತು ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು INDIA ಮೈತ್ರಿಕೂಟ ಮುಂದಾಗಿದೆ.

ಈ ಪ್ರಸ್ತಾವನೆಗೆ ವಿಪಕ್ಷಗಳ INDIA ಮೈತ್ರಿಕೂಟದ 70 ಸಂಸದರು ಸಹಿಯನ್ನು ಹಾಕಿದ್ದಾರೆ ಎಂದು ಹೇಳಲಾಗಿದೆ. ಈ ಕ್ರಮವು ರಾಜ್ಯಸಭೆಯಲ್ಲಿ ಜಗದೀಪ್‌ ಧನ್ಕರ್‌ ಅವರು ಕಲಾಪಗಳನ್ನು ನಿಭಾಯಿಸುತ್ತಿರುವ ರೀತಿ ಬಗ್ಗೆ ವಿರೋಧ ಪಕ್ಷದ ನಾಯಕರಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ತೋರಿಸುತ್ತದೆ.

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಆಮ್ ಆದ್ಮಿ ಪಾರ್ಟಿ(ಎಎಪಿ), ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಇತರ INDIA ಮೈತ್ರಿ ಕೂಟದ ನಾಯಕರು ಈ ಪ್ರಸ್ತಾವನೆಗೆ ಬೆಂಬಲಿಸಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯಸಭಾ ಸ್ಪೀಕರ್ ಸದನದಲ್ಲಿ ಕಲಾಪದ ವೇಳೆ ಪಕ್ಷಪಾತ ಮಾಡುತ್ತಾರೆ, ಅವರು ತಮ್ಮ ಭಾಷಣಗಳಿಗೆ ಆಗಾಗ್ಗೆ ಅಡ್ಡಿ ಪಡಿಸುತ್ತಿದ್ದಾರೆ, ನಿರ್ಣಾಯಕ ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆಗೆ ಅವಕಾಶ ನೀಡುತ್ತಿಲ್ಲ ಮತ್ತು ವಿವಾದಾತ್ಮಕ ವಿಷಯಗಳ ಬಗ್ಗೆ ಚರ್ಚೆಗಳಲ್ಲಿ ಆಡಳಿತ ಪಕ್ಷದ ಪರವಾಗಿದ್ದಾರೆ ಎಂದು ವಿಪಕ್ಷಗಳ ಸಂಸದರು ಈ ಮೊದಲು ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News