ಪಂಜಾಬ್ ಗಡಿಯಲ್ಲಿ ಪಾಕಿಸ್ತಾನಿ ಡ್ರೋನ್, 3-ಕೆಜಿ ಡ್ರಗ್ಸ್ ವಶ
ಚಂಡೀಗಢ: ಭಾರತ-ಪಾಕಿಸ್ತಾನದ ತರ್ನ್ ತರನ್ ಜಿಲ್ಲೆಯ ಗಡಿಯ ಸಮೀಪದಲ್ಲಿ ಬಿಎಸ್ ಎಫ್ ಹಾಗೂ ಪಂಜಾಬ್ ಪೊಲೀಸರ ಜಂಟಿ ತಂಡವು ಶಂಕಿತ ಪಾಕಿಸ್ತಾನಿ ಡ್ರೋನ್ ಮತ್ತು ಮೂರು ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ಸೋಮವಾರ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ಭದ್ರತಾ ಪಡೆ (ಬಿಎಸ್ ಎಫ್) ಪಡೆಗಳು ರವಿವಾರ ತಡರಾತ್ರಿ ತರ್ನ್ ತರನ್ ಜಿಲ್ಲೆಯ ಕಲಾಶ್ ಗ್ರಾಮದ ಬಳಿ ಡ್ರೋನ್ ಝೇಂಕರಿಸುವ ಶಬ್ದವನ್ನು ಕೇಳಿದೆ ಎಂದು ಬಿಎಸ್ ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ಸಮಯದಲ್ಲಿ ಮಾನವರಹಿತ ವೈಮಾನಿಕ ವಾಹನವು ಪಾಕಿಸ್ತಾನದಿಂದ ಭಾರತದ ಭೂ ಪ್ರದೇಶವನ್ನು ಪ್ರವೇಶಿಸಿದೆ ಎಂದು ಶಂಕಿಸಲಾಗಿದೆ.
ಸೋಮವಾರ ಪಂಜಾಬ್ ಪೊಲೀಸರೊಂದಿಗೆ ನಡೆಸಿರುವ ಜಂಟಿ ಶೋಧಕಾರ್ಯದ ಸಮಯದಲ್ಲಿ, ಖೇಮ್ಕರನ್ ಗ್ರಾಮದ ಬಳಿಯ ಹೊಲದಿಂದ ಡ್ರೋನ್ (ಹೆಕ್ಸಾಕಾಪ್ಟರ್) ಹಾಗೂ ಹಳದಿ ಟೇಪ್ ನಿಂದ ಸುತ್ತಿದ 3 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
"ಬಿಎಸ್ ಎಫ್ ಮತ್ತು ಪಂಜಾಬ್ ಪೊಲೀಸರ ಜಂಟಿ ಪ್ರಯತ್ನದಿಂದ ಮತ್ತೊಂದು ಪಾಕಿಸ್ತಾನಿ ಡ್ರೋನ್ ವಶಪಡಿಸಿಕೊಂಡಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.