×
Ad

ಉತ್ತರ ಪ್ರದೇಶ | ರನ್‌ವೇಯಿಂದ ಜಾರಿದ ಲಘು ವಿಮಾನ : ಆರು ಜನರು ಅಪಾಯದಿಂದ ಪಾರು

Update: 2025-10-09 21:53 IST

Photo Credi : NDTV 

ಲಕ್ನೋ,ಅ.9: ಗುರುವಾರ ಬೆಳಿಗ್ಗೆ ಉತ್ತರ ಪ್ರದೇಶದ ಫರೂಕಾಬಾದ್‌ನ ಮುಹಮ್ಮದಾಬಾದ್‌ ವಾಯುನೆಲೆಯಲ್ಲಿ ಖಾಸಗಿ ವಿಮಾನವೊಂದು ರನ್‌ವೇದಿಂದ ಜಾರಿತ್ತಾದರೂ ಆವರಣ ಗೋಡೆಯಿಂದ ಅನತಿ ದೂರದಲ್ಲಿಯೇ ನಿಂತಿದ್ದರಿಂದ ಸಂಭಾವ್ಯ ದೊಡ್ಡ ಅಪಘಾತವೊಂದು ಸ್ವಲ್ಪದರಲ್ಲಿ ತಪ್ಪಿದೆ.

ನಾಲ್ವರು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ ಆರು ಜನರು ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ.

ಜೆಟ್‌ಸರ್ವ್ ಏವಿಯೇಶನ್‌ಗೆ ಸೇರಿದ ಈ ವಿಮಾನ ಪೂರ್ವಾಹ್ನ 11:15ರ ಸುಮಾರಿಗೆ ಭೋಪಾಲ್‌ಗೆ ತೆರಳಲು ಟೇಕ್‌ಆಫ್ ಆರಂಭಿಸಿತ್ತು. ಆದರೆ ರನ್‌ವೇಯಲ್ಲಿ ಸುಮಾರು 400 ಮೀ.ದೂರ ಸಾಗಿದ ಬಳಿಕ ದಿಕ್ಕು ತಪ್ಪಿ ನೇರ ಆವರಣ ಗೋಡೆಯತ್ತ ಚಲಿಸಿತ್ತು. ನಸೀಬ್ ಬಮನ್ ಮತ್ತು ಪ್ರತೀಕ ಫೆರ್ನಾಂಡಿಸ್ ವಿಮಾನದ ಪೈಲಟ್‌ಗಳಾಗಿದ್ದರು ಎಂದು ವರದಿಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News