×
Ad

ಉತ್ಪನ್ನಗಳ ಗುಣಮಟ್ಟ, ಮಾರಾಟಗಾರರ ವಿವರಗಳನ್ನು ತಿಳಿಯುವ ಹಕ್ಕು ಗ್ರಾಹಕರಿಗಿದೆ ಎಂದು ಘೋಷಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ

Update: 2025-07-20 15:45 IST

ಸುಪ್ರೀಂ ಕೋರ್ಟ್‌ (Photo credit: PTI)

ಹೊಸದಿಲ್ಲಿ: ನ್ಯಾಯಸಮ್ಮತವಲ್ಲದ ನಿರ್ಬಂಧಿತ ವ್ಯಾಪಾರ ಪದ್ಧತಿಗಳನ್ನು ನಿವಾರಿಸಲು ಉತ್ಪನ್ನಗಳ ಗುಣಮಟ್ಟ,ಶುದ್ಧತೆ ಮತ್ತು ಪ್ರಮಾಣೀಕರಣ ಬಗ್ಗೆ ಹಾಗೂ ವಿತರಕರು ಮತ್ತು ಮಾರಾಟಗಾರರ ವಿವರಗಳನ್ನು ತಿಳಿದುಕೊಳ್ಳುವ ಹಕ್ಕು ಗ್ರಾಹಕರಿಗೆ ಇದೆ ಎಂದು ಘೋಷಿಸುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ.

ಪ್ರತಿಯೊಬ್ಬ ವಿತರಕ,ವ್ಯಾಪಾರಿ ಮತ್ತು ಅಂಗಡಿ ಮಾಲಿಕರು ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಉದ್ಯೋಗಿಗಳ ಸಂಖ್ಯೆ ಸೇರಿದಂತೆ ನೋಂದಣಿ ವಿವರಗಳನ್ನು ಪ್ರವೇಶ ದ್ವಾರದಲ್ಲಿ ಜನರಿಗೆ ಗೋಚರಿಸುವಂತೆ ದಪ್ಪಕ್ಷರಗಳಲ್ಲಿ ಪ್ರದರ್ಶಿಸುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿಯು ಜು.21ರಂದು ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಸಂದೀಪ ಮೆಹ್ತಾ ಅವರ ಪೀಠದ ಮುಂದೆ ವಿಚಾರಣೆಗೆ ಬರಲಿದೆ.

‘ತಿಳಿದುಕೊಳ್ಳುವ ಹಕ್ಕು’ ಗ್ರಾಹಕರು ಉತ್ಪನ್ನ/ಸೇವೆಯ ಕುರಿತು ತಪ್ಪು ಮಾಹಿತಿಗಳನ್ನು ನೀಡುವ ಹಾಗೂ ಮಾರಾಟದ ಬಳಿಕ ಕಣ್ಮರೆಯಾಗಬಹುದಾದ ವಿತರಕರು, ಮಾರಾಟಗಾರರು ಮತ್ತು ಅಂಗಡಿ ಮಾಲಿಕರಿಂದ ವಂಚನೆ ಅಥವಾ ಮೋಸಕ್ಕೆ ಬಲಿಯಾಗುವುದನ್ನು ತಪ್ಪಿಸಲು ನೆರವಾಗುತ್ತದೆ ಎಂದು ವಕೀಲ ಅಶ್ವಿನಿಕುಮಾರ ದುಬೆ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.

ಗ್ರಾಹಕರು ಉತ್ಪನ್ನ ಅಥವಾ ಸೇವೆಯಲ್ಲಿ ಸಮಸ್ಯೆಯನ್ನು ಹೊಂದಿದ್ದರೆ ಗ್ರಾಹಕ ಪರಿಹಾರ ವೇದಿಕೆಗಳ ಮೂಲಕ ದೂರು ಸಲ್ಲಿಸಲು ಮತ್ತು ಪರಿಹಾರವನ್ನು ಕೋರಲು ವಿತರಕರು ಮತ್ತು ಮಾರಾಟಗಾರರ ಕುರಿತು ವಿವರಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News