×
Ad

ಗೋವಾ | 77 ಅಡಿ ಎತ್ತರದ ಶ್ರೀರಾಮ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

Update: 2025-11-28 20:10 IST

Photo Credit : PTI

ಪಣಐ,ನ.28: ದಕ್ಷಿಣ ಗೋವಾದ ಕಾಣಕೋಣ ಬಳಿಯ ಪರ್ತಗಾಳಿಯಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದ 550ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಠದ ಆವರಣದಲ್ಲಿ ಸ್ಥಾಪಿಸಲಾಗಿರುವ 77 ಅಡಿ ಎತ್ತರದ ಶ್ರೀರಾಮನ ಕಂಚಿನ ವಿಗ್ರಹವನ್ನು ಶುಕ್ರವಾರ ಅನಾವರಣಗೊಳಿಸಿದರು.

ಮೋದಿ ಮಠದ ಆವರಣದಲ್ಲಿ ನಿರ್ಮಿಸಲಾಗಿದ್ದ ವಿಶೇಷ ಹೆಲಿಪ್ಯಾಡ್‌ ನಲ್ಲಿ ಬಂದಿಳಿದರು.

ಗುಜರಾತಿನ ಏಕತಾ ವಿಗ್ರಹವನ್ನು ವಿನ್ಯಾಸಗೊಳಿಸಿದ್ದ ಶಿಲ್ಪಿ ರಾಮ ಸುತಾರ್ ಅವರು ಶ್ರೀರಾಮನ ಪ್ರತಿಮೆಯನ್ನು ನಿರ್ಮಿಸಿದ್ದಾರೆ ಎಂದು ಗೋವಾದ ಪಿಡಬ್ಲ್ಯುಡಿ ಸಚಿವ ದಿಗಂಬರ ಕಾಮತ್ ಹೇಳಿದರು. ಇದು ವಿಶ್ವದಲ್ಲಿಯೇ ಶ್ರೀರಾಮನ ಅತ್ಯಂತ ಎತ್ತರದ ಪ್ರತಿಮೆಯಾಗಿದೆ ಎಂದೂ ಅವರು ತಿಳಿಸಿದರು.

ಮಠದ ಸಂಪ್ರದಾಯಗಳ 550ನೇ ವರ್ಷಾಚರಣೆಯ ಸಂಭ್ರಮಗಳ ಅಂಗವಾಗಿ ನ.27ರಿಂದ ಡಿ.7ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.

370 ವರ್ಷಗಳ ಹಿಂದೆ ಪರ್ತಗಾಳಿ ಗ್ರಾಮದಲ್ಲಿ ಶ್ರೀಮಠದ ಆವರಣ ನಿರ್ಮಾಣಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News