×
Ad

ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ಹೌರಾ-ಗುವಾಹಟಿ ನಡುವೆ ಸಂಚರಿಸಲಿರುವ ರೈಲು

Update: 2026-01-17 20:20 IST

Photo Credit : PTI 

ಹೌರಾ: ಹೌರಾ ಮತ್ತು ಗುವಾಹಟಿ (ಕಾಮಾಖ್ಯಾ) ಮಾರ್ಗವಾಗಿ ಸಂಚರಿಸಲಿರುವ ಭಾರತದ ಮೊದಲ ವಂದೇಭಾರತ್ ಸ್ಲೀಪರ್ ರೈಲಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಿದರು. ರೈಲ್ವೆಯ ಆಧುನೀಕರಣ ಪ್ರಕ್ರಿಯೆಯಲ್ಲಿ ಈ ಉಪಕ್ರಮವನ್ನು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ.

ದೂರದ ರೈಲು ಪ್ರಯಾಣವನ್ನು ಮತ್ತಷ್ಟು ಆರಾಮದಾಯಕ ಹಾಗೂ ಅನುಕೂಲಕರವಾಗಿಸುವ ಉದ್ದೇಶವನ್ನು ವಂದೇಭಾರತ್ ಸ್ಲೀಪರ್ ಆವೃತ್ತಿ ಹೊಂದಿದೆ.

ಆಧುನಿಕ ಭಾರತದ ಬೆಳೆಯುತ್ತಿರುವ ಸಾರಿಗೆ ಅಗತ್ಯತೆಯನ್ನು ಪೂರೈಸಲು ಅಭಿವೃದ್ಧಿ ಪಡಿಸಲಾಗಿರುವ ವಂದೇಭಾರತ್ ರೈಲು ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದ್ದು, ಅಗ್ಗದ ದರದಲ್ಲಿ ಪ್ರಯಾಣಿಕರಿಗೆ ವಿಮಾನ ಯಾನ ಸಂಸ್ಥೆ ನೀಡುವಂತಹ ಪ್ರಯಾಣದ ಅನುಭವವನ್ನು ನೀಡಲಿದೆ. ದೂರದ ಪ್ರಯಾಣಗಳನ್ನು ವಂದೇಭಾರತ್ ಸ್ಲೀಪರ್ ರೈಲು ಕ್ಷಿಪ್ರ, ಸುರಕ್ಷಿತ ಹಾಗೂ ಹೆಚ್ಚು ಅನುಕೂಲಕರವಾಗಿಸಲಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News