×
Ad

ಪ್ರಧಾನಿ ಮೋದಿ ಒಬಿಸಿ ಕುಟುಂಬದಲ್ಲಿ ಹುಟ್ಟಲಿಲ್ಲ, ಜನರನ್ನು ದಾರಿತಪ್ಪಿಸುತ್ತಿದ್ದಾರೆ: ರಾಹುಲ್‌ ಗಾಂಧಿ ಆರೋಪ

Update: 2024-02-08 14:15 IST

Photo: PTI

ಝರ್ಸುಗುಡ: “ಪ್ರಧಾನಿ ನರೇಂದ್ರ ಮೋದಿ ಇತರ ಹಿಂದುಳಿದ ವರ್ಗದ ಕುಟುಂಬದಲ್ಲಿ ಹುಟ್ಟಿದವರಲ್ಲ, ಅವರು ತಾವು ಒಬಿಸಿ ಎಂದು ಹೇಳಿಕೊಂಡು ಜನರನ್ನು ದಾರಿತಪ್ಪಿಸುತ್ತಿದ್ದಾರೆ” ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಒಡಿಶಾದಲ್ಲಿ ತಮ್ಮ ಭಾರತ್‌ ಜೋಡೋ ನ್ಯಾಯ್‌ ಯಾತ್ರಾದ ಮೂರನೇ ಮತ್ತು ಅಂತಿಮ ದಿನದಂದು ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ವರ್ಗಕ್ಕೆ ಸೇರಿದ ಕುಟುಂಬದಲ್ಲಿ ಹುಟ್ಟಿದವರು ಎಂದಿದ್ದಾರೆ.

“ತಾವು ಒಬಿಸಿ ಎಂದು ಹೇಳಿಕೊಂಡು ಮೋದೀ ಜಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಅವರು ತೆಲಿ ಜಾತಿಯ ಕುಟುಂಬದವರಾಗಿದ್ದಾರೆ. ಈ ಜಾತಿಯನ್ನು 2000ರಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವಿದ್ದಾಗ ಒಬಿಸಿ ಪಟ್ಟಿಗೆ ಸೇರಿಸಲಾಗಿತ್ತು. ಆದ್ದರಿಂದ ಹುಟ್ಟಿನಿಂದ ಮೋದೀ ಜಿ ಒಬಿಸಿ ಅಲ್ಲ,” ಎಂದು ರಾಹುಲ್‌ ಹೇಳಿದರು.

“ಪ್ರಧಾನಿ ಮೋದಿ ಅವರು ಇತರ ಹಿಂದುಳಿದ ವರ್ಗಗಳ ಜನರ ಕೈಕುಲುಕುವುದಿಲ್ಲ ಆದರೆ “ಕೋಟ್ಯಾಧಿಪತಿಗಳನ್ನು ಆಲಂಗಿಸುತ್ತಾರೆ” ಎಂದೂ ರಾಹುಲ್‌ ಹೇಳಿದರು.

ರಾಹುಲ್‌ ಇಲ್ಲಿನ ಕಿಸಾನ್‌ ಚೌಕ್‌ ತನಕ ತೆರೆದ ಜೀಪಿನಲ್ಲಿ ಸಾಗಿದರು. ಅವರ ಜೊತೆಗೆ ಎಐಸಿಸಿ ನಾಯಕ ಅಜೊಯ್‌ ಕುಮಾರ್‌ ಮತ್ತು ಒಡಿಶಾ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಶರತ್‌ ಪಟ್ನಾಯಕ್‌ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News