×
Ad

ಭೂಮಿಯ ಇಲೆಕ್ಟ್ರಾನ್‍ಗಳಿಂದ ಚಂದ್ರನಲ್ಲಿ ನೀರು ಸೃಷ್ಟಿ ಸಾಧ್ಯತೆ; ಚಂದ್ರಯಾನ-1ರ ದತ್ತಾಂಶಗಳ ಅಧ್ಯಯನ ವರದಿ

Update: 2023-09-15 23:19 IST

Photo: X\ @ISRO

Read more at: https://www.deccanherald.com/science/space/chandrayaan-1-data-suggests-electrons-from-earth-forming-water-on-moon-2687645

ಬೆಂಗಳೂರು: ಭೂಮಿಯಿಂದ ಹೊರಹೊಮ್ಮುವ ಅಧಿಕ ಶಕ್ತಿಯ ಇಲೆಕ್ಟ್ರಾನ್ ಗಳು ಚಂದ್ರನಲ್ಲಿ ನೀರನ್ನು ಸೃಷ್ಟಿಸುವ ಸಾಧ್ಯತೆಯಿದೆಯೆಂದು ಭಾರತದ ಚಂದ್ರಯಾನ-1 ಯೋಡನೆಯ ದತ್ತಾಂಶಗಳನ್ನು ವಿಶ್ಲೇಷಿಸುತ್ತಿರುವ ವಿಜ್ಞಾನಿಗಳು ತಿಳಿಸಿದ್ದಾರೆ.

ಭೂಮಿಯನ್ನು ಆವರಿಸಿರುವ ಪ್ಲಾಸ್ಮಾ ಪದರದಲ್ಲಿನ ಇಲೆಕ್ಟ್ರಾನ್ ಗಳು ಚಂದ್ರನ ಮೇಲ್ಮೈಯಲ್ಲಿರುವ ಬಂಡೆಗಲ್ಲುಗಳು ಹಾಗೂ ಖನಿಜಗಳ ಒಡೆಯುವಿಕೆ ಹಾಗೂ ಕರಗುವಿಕೆಗೆ ಸಂಬಂಧಿಸಿ ಪ್ರಕ್ರಿಯೆಯಲ್ಲಿ ಪಾತ್ರವಹಿಸುತ್ತಿರುವುದನ್ನು ಅಮೆರಿಕ ಹವಾಯಿ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು ಪತ್ತೆಹಚ್ಚಿದೆ.

ಚಂದ್ರನ ಮೇಲ್ಮೈಯಲ್ಲಿ ನೀರಿನ ಸಂರಚನೆಗೆ, ಭೂಮಿಯಿಂದ ಹೊರಹೊಮ್ಮುವ ಇಲೆಕ್ಟ್ರಾನ್ ಗಳು ನೆರವಾಗಿರಬಹುದು ಎಂದು ವೈಜ್ಞಾನಿಕ ಪತ್ರಿಕೆ ‘ನೇಚರ್ ಅಸ್ಟ್ರಾನಮಿ’ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂದವು ತಿಳಿಸಿದೆ.

ಚಂದ್ರನಲ್ಲಿ ಶಾಶ್ವತವಾಗಿ ಕತ್ತಲೆಯಿಂದ ಆವೃತವಾಗಿರುವ ಪ್ರದೇಶಗಳಲ್ಲಿ ಈ ಮೊದಲು ಪತ್ತೆಯಾಗಿರುವ ನೀರಿನ ಉಗಮದ ಬಗ್ಗೆಯೂ ಬೆಳಕು ಚೆಲ್ಲಲು ಈ ಸಂಶೋಧನೆ ನೆರವಾಗುವ ಸಾಧ್ಯತೆಯಿಯೆಂದು ಸಂಸೋಧಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News