×
Ad

ಕೇಂದ್ರ ಲೋಕ ಸೇವಾ ಆಯೋಗದ ನೂತನ ಅಧ್ಯಕ್ಷೆಯಾಗಿ ಪ್ರೀತಿ ಸೂದನ್ ನೇಮಕ

Update: 2024-07-31 11:56 IST

ಪ್ರೀತಿ ಸೂದನ್ (Photo:X/ANI)

ಹೊಸದಿಲ್ಲಿ: ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ನೂತನ ಅಧ್ಯಕ್ಷೆಯಾಗಿ ಕೇಂದ್ರದ ಮಾಜಿ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸೂದನ್ ಅವರನ್ನು ನೇಮಕ ಮಾಡಲಾಗಿದೆ.

ಆಗಸ್ಟ್‌ 1ರಂದು ಅಧಿಕಾರ ವಹಿಸಿಕೊಳ್ಳಲಿರುವ ಪ್ರೀತಿ ಸೂದನ್ ಅವರು 2025ರ ಎಪ್ರಿಲ್ ವರೆಗೆ ಅಧಿಕಾರಾವಧಿ ಹೊಂದಿರುತ್ತಾರೆ.

ಪ್ರೀತಿ ಸೂದನ್ 2022 ರಿಂದ ಯುಪಿಎಸ್‌ಸಿ ಸದಸ್ಯರಾಗಿದ್ದಾರೆ.

ಐಎಎಸ್‌ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ನೇಮಕಾತಿ ಕುರಿತ ವಿವಾದದ ಬಳಿಕ ಯುಪಿಎಸ್‌ಸಿ ಅಧ್ಯಕ್ಷರಾಗಿದ್ದ ಮನೋಜ್‌ ಸೋನಿ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News