×
Ad

ಪ್ರೇಮ ಮಂದಿರ ಸಂಸ್ಥಾಪಕ ಕೃಪಾಳು ಮಹಾರಾಜ್ ಪುತ್ರಿ ರಸ್ತೆ ಅಪಘಾತದಲ್ಲಿ ಮೃತ್ಯು

Update: 2024-11-25 09:25 IST

PC: x.com/CultNEWS101

ನೋಯ್ಡಾ: ಯಮುನಾ ಎಕ್ಸ್ ಪ್ರೆಸ್ ಹೈವೇಯಲ್ಲಿ ಚಲಿಸುತ್ತಿದ್ದ ಟೊಯೋಟಾ ಕಾಮ್ರಿ ಹಾಗೂ ಇನ್ನೋವಾ ಹೈಕ್ರಾಸ್ ವಾಹನಗಳಿಗೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ದುರಂತದಲ್ಲಿ ವೃಂದಾವನದ ಪ್ರೇಮಮಂದಿರ ಸಂಸ್ಥಾಪಕ ಕೃಪಾಳು ಮಹಾರಾಜ್ ಅವರ 75 ವರ್ಷ ವಯಸ್ಸಿನ ಪುತ್ರಿ ವಿಶಾಖಾ ತ್ರಿಪಾಠಿ ಮೃತಪಟ್ಟಿದ್ದಾರೆ.

ವಿಶಾಖಾ ಅವರ ಇಬ್ಬರು ಸಹೋದರಿಯರು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ. ದಂಕೂರ್ ಎಂಬಲ್ಲಿ ಮುಂಜಾನೆ 4ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಪಾದಚಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಟ್ರಕ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ವಿಶಾಖಾ ತ್ರಿಪಾಠಿ ಹಾಗೂ ಇತರರು ಮಥುರಾದಿಂದ ದೆಹಲಿಯ ದ್ವಾರಕಾದಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದಾಗ ಟ್ರಕ್ ಹಿಂದಿನಿಂದ ಇವರ ಕಾರುಗಳಿಗೆ ಢಿಕ್ಕಿ ಹೊಡೆಯಿತು ಎಂದು ಪೊಲೀಸರು ಹೇಳಿದ್ದಾರೆ.

ವಿಶಾಖಾ ಅವರ ಸಹೋದರಿಯರಾದ ಕೃಷ್ಣಾ ತ್ರಿಪಾಠಿ (67), ಶ್ಯಾಮಾ ತ್ರಿಪಾಠಿ (69), ಚಾಲಕ ಸಂಜಯ್ ಮಲಿಕ್ (57), ಹನ್ಸಾ ಪಟೇಲ್ (56), ಕರಿಷ್ಮಾ ಪಟೇಲ್ (53), ಜನುಕಾ ಖಾಡ್ಕಾ (40) ಗಾಯಗೊಂಡಿದ್ದಾರೆ. ಇವರೆಲ್ಲರೂ ಮಥುರಾದವರಾಗಿದ್ದು, ದೆಹಲಿಯ ದೀಪಕ್ ಪಟೇಲ್ (35) ಕೂಡಾ ಗಾಯಗೊಂಡಿದ್ದಾರೆ.


PC: x.com/CultNEWS101

 

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News