ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ ಕಾಂಗ್ರೆಸ್‌ಗೆ ವಾಪಸ್
PC : NDTV
ಕೋಲ್ಕತಾ: ಮಾಜಿ ರಾಷ್ಟ್ರಪತಿ ದಿ.ಪ್ರಣವ್ ಮುಖರ್ಜಿಯವರ ಪುತ್ರ ಅಭಿಜಿತ್ ಮುಖರ್ಜಿ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶುಭಂಕರ ಸರ್ಕಾರ್ ಅವರ ಉಪಸ್ಥಿತಿಯಲ್ಲಿ ಅಭಿಜಿತ್ ‘ಘರ್‌ವಾಪ್ಸಿ’ಯು ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲು ತನಗೆ ಕಾಂಗ್ರೆಸ್ ನ ಅಗತ್ಯವಿಲ್ಲ ಎಂದು ಇತ್ತೀಚಿಗೆ ಹೇಳಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಪಕ್ಷದ ಉತ್ತರವಾಗಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಿಸಿದ್ದಾರೆ.
ಅಭಿಜಿತ್ 2021ರಲ್ಲಿ ಕಾಂಗ್ರೆಸ್ ತೊರೆದು ಟಿಎಂಸಿಗೆ ಸೇರಿದ್ದರು. ಅವರು ರಾಜ್ಯವ್ಯಾಪಿ ಪ್ರಭಾವವನ್ನು ಹೊಂದಿರುವ ನಾಯಕರಲ್ಲದಿದ್ದರೂ ಕಾಂಗ್ರೆಸ್ ಗೆ ಅವರ ವಾಪಸಾತಿಯು ಸಾಂಕೇತಿಕ ಸಂದೇಶವನ್ನು ರವಾನಿಸಿದ್ದು, ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಪ್ರಣವ್ ಮುಖರ್ಜಿಯವರ ಪುತ್ರರಾಗಿರುವುದರಿಂದ ಪಶ್ಚಿಮ ಬಂಗಾಳದಲ್ಲಿ ಕಳೆದುಕೊಂಡಿರುವ ತನ್ನ ನೆಲೆಯನ್ನು ಮರಳಿ ಗಳಿಸಲು ಕಾಂಗ್ರೆಸ್‌ನ ಸ್ಥೈರ್ಯವನ್ನು ಹೆಚ್ಚಿಸಲಿದೆ.
ಅಭಿಜಿತ್ 2012ರಿಂದ 2019ರವರೆಗೆ ಜಂಗೀಪುರ ಕ್ಷೇತ್ರದಿಂದ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರಾಗಿದ್ದರು.