×
Ad

ಗೋವಾ ರಾಜ್ಯಪಾಲರಾಗಿ ಪುಷ್ಪತಿ ಅಶೋಕ ಗಜರಾಜು ಪ್ರಮಾಣ ವಚನ

Update: 2025-07-26 21:31 IST

ಪುಷ್ಪತಿ ಅಶೋಕ ಗಜರಾಜು | PTI

ಡೋನಾ ಪೌಲಾ (ಗೋವಾ),ಜು.26: ಗೋವಾದ ನೂತನ ರಾಜ್ಯಪಾಲರಾಗಿ ಪುಷ್ಪತಿ ಅಶೋಕ ಗಜಪತಿ ರಾಜು ಶನಿವಾರ ಪ್ರಮಾಣವಚನ ಸ್ವೀಕರಿಸಿದರು.

ಇಲ್ಲಿನ ರಾಜಭವನದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸರಕಾರದ ಜೊತೆ ಜನರು ಸಹಯೋಗವನ್ನು ಏರ್ಪಡಿಸುವಂತೆ ಹಾಗೂ ಜಾಗತಿಕ ವೇದಿಕೆಯಲ್ಲಿ ಭಾರತದ ಉತ್ಥಾನಕ್ಕೆ ನೆರವಾಗುವಂತೆ ಕರೆ ನೀಡಿದರು.

ಗೋವಾದಲ್ಲಿರುವುದಕ್ಕಾಗಿ ನನಗೆ ಸಂತಸವಾಗಿದೆ. ದೇಶಕ್ಕೆ ಅದರಲ್ಲೂ ವಿಶೇಷವಾಗಿ ಗೋವಾದ ಜನತೆಗೆ ಸೇವೆ ಸಲ್ಲಿಸುವುದಾಗಿ ಪ್ರತಿಜ್ಞೆ ಮಾಡುತ್ತಿದ್ದೇನೆ. ಈ ಹುದ್ದೆಗೆ ನಿಯೋಜನೆಗೊಂಡಿರುವುದು ನನ್ನ ಮೊದಲ ಅನುಭವವಾಗಿದೆ. ರಾಜಕೀಯ ಸಂರಚನೆಯಲ್ಲಿ ನಾನು ದೀರ್ಘವಾದ ಅನುಭವವನ್ನು ಹೊಂದಿದ್ದೇನೆ. ಭಾರತವನ್ನು ಇಡೀ ಜಗತ್ತಿನಲ್ಲೇ ಅದ್ವಿತೀಯ ರಾಷ್ಟ್ರವನ್ನಾಗಿ ಮಾಡಲು ಸರಕಾರದೊಂದಿಗೆ ಶ್ರಮಿಸುವಂತೆ ಜನತೆಗೆ ಕರೆ ನೀಡುವುದಾಗಿ ಹೇಳಿದರು.

ಹಿರಿಯ ರಾಜಕಾರಣಿಯಾದ ಅಶೋಕ ಗಜಪತಿ ರಾಜು ಅವರು ನಾಗರಿಕ ವಾಯುಯಾನ ಸಚಿವಾಲಯದಲ್ಲಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಪಿ.ಎಸ್.ಶ್ರೀಧರನ್ ಪಿಳ್ಳೆ ಅವರ ನಿರ್ಗಮನದ ಬಳಿಕ ಅಶೋಕ್ ಗಜಪತಿ ರಾಜು ಅವರು ಗೋವಾ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News