×
Ad

ಪೂಂಚ್‌ಗೆ ರಾಹುಲ್ ಗಾಂಧಿ ಭೇಟಿ: ಪಾಕ್ ಶೆಲ್ ದಾಳಿಯಲ್ಲಿ ಮೃತರ ಕುಟುಂಬಸ್ಥರ ಜೊತೆ ಮಾತುಕತೆ

Update: 2025-05-24 17:48 IST

ರಾಹುಲ್ ಗಾಂಧಿ | PC : PTI 

ಹೊಸದಲ್ಲಿ: ಜಮ್ಮುಕಾಶ್ಮೀರದ ಪೂಂಚ್‌ನಲ್ಲಿ ಪಾಕಿಸ್ತಾನದ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ, ಘಟನೆಯನ್ನು ದೊಡ್ಡ ದುರಂತ ಎಂದು ಹೇಳಿದರು. ಸಂತ್ರಸ್ತರ ಸಮಸ್ಯೆಗಳ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಧ್ವನಿ ಎತ್ತುವ ಭರವಸೆ ನೀಡಿದರು.

ಪೂಂಚ್ ಪಟ್ಟಣಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಮೇ 7ರಿಂದ ಮೇ 10ರ ನಡುವೆ ಶೆಲ್ ದಾಳಿಯಲ್ಲಿ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ಸಂವಾದ ನಡೆಸಿದರು.

ʼಇದು ಒಂದು ದೊಡ್ಡ ದುರಂತ. ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರು (ಪಾಕಿಸ್ತಾನಿ ಸೇನೆ) ನಾಗರಿಕರನ್ನು ನೇರವಾಗಿ ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ನಾನು ಸಂತ್ರಸ್ಥರ ಜೊತೆ ಮಾತನಾಡಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಅವರು ತಮ್ಮ ಸಮಸ್ಯೆಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತುವಂತೆ ನನ್ನಲ್ಲಿ ಕೇಳಿಕೊಂಡರುʼ ಎಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ರಾಹುಲ್ ಗಾಂಧಿ ಹೇಳಿದರು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, ʼಇಂದು ನಾನು ಪೂಂಚ್‌ನಲ್ಲಿ ಪಾಕಿಸ್ತಾನದ ಪಡೆಗಳ ಶೆಲ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳನ್ನು ಭೇಟಿಯಾದೆ. ಹಾನಿಗೊಳಗಾದ ಮನೆಗಳು, ಚದುರಿದ ವಸ್ತುಗಳು, ಒದ್ದೆಯಾದ ಕಣ್ಣುಗಳು ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡ ಜನರ ನೋವಿನ ಕಥೆಗಳನ್ನು ಆಲಿಸಿದೆ. ಅವರ ಧೈರ್ಯಕ್ಕೆ ನಮನಗಳುʼ ಎಂದು ಹೇಳಿದರು.

ನಾನು ಸಂತ್ರಸ್ಥರ ಕುಟುಂಬದ ಜೊತೆ ಬಲವಾಗಿ ನಿಲ್ಲುತ್ತೇನೆ. ಖಂಡಿತವಾಗಿಯೂ ಅವರ ಬೇಡಿಕೆಗಳು ಮತ್ತು ಸಮಸ್ಯೆಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News