×
Ad

ತತ್ಕಾಲ್ ದೃಢೀಕರಣಕ್ಕೆ ಇನ್ನಷ್ಟು ಗುರುತಿನ ಪತ್ರಗಳ ಸೇರ್ಪಡೆಗೆ ರೈಲ್ವೆ ಇಲಾಖೆ ಚಿಂತನೆ

Update: 2025-06-29 09:05 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ತತ್ಕಾಲ್ ಟಿಕೆಟ್ಗಳನ್ನು ಬುಕ್ಕಿಂಗ್ ಮಾಡುವ ಸಲುವಾಗಿ ಐಆರ್ಸಿಟಿಸಿ ಖಾತೆಗಳನ್ನು ದೃಢೀಕರಿಸಿಕೊಳ್ಳಲು ಆಧಾರ್ ಜತೆಗೆ ಹೆಚ್ಚುವರಿ ಗುರುತಿನ ದಾಖಲೆಗಳನ್ನು ಬಳಸಲು ಅನುವು ಮಾಡಿಕೊಡುವ ಬಗ್ಗೆ ಭಾರತೀಯ ರೈಲ್ವೆ ಚಿಂತನೆ ನಡೆಸಿದೆ.

ಡಿಜಿಲಾಕರ್ನಲ್ಲಿ ಅಪ್ಲೋಡ್ ಮಾಡಿ ಸಂರಕ್ಷಿಸಿ ಇಡಲಾಗುವ ಪಾನ್ಕಾರ್ಡ್, ವಾಹನ ಚಾಲನಾ ಲೈಸನ್ಸ್ ಮತ್ತು ಮತದಾರರ ಐಡಿ ಕಾರ್ಡ್ಗಳನ್ನು ಬಳಕೆದಾರರ ದೃಢೀಕರಣಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.

ಬಳಕೆದಾರರ ಐಆರ್ಸಿಟಿಸಿ ಖಾತೆಗಳ ಜತೆ ಆಧಾರ್ ಸಂಪರ್ಕಿಸುವ ಹೊಸ ವ್ಯವಸ್ಥೆ ಜಾರಿಗೆ ಬರುವ ಮುನ್ನಾದಿನವಾದ ಸೋಮವಾರ ರೈಲ್ವೆ ಸಚಿವಾಲಯ ಈ ಪರಿಷ್ಕರಣೆಯನ್ನು ಪ್ರಕಟಿಸುವ ಸಾಧ್ಯತೆ ಇದೆ.

ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಸುಮಾರು ಪ್ರತಿದಿನ 2.2 ಲಕ್ಷ ಪ್ರಯಾಣಿಕರು ಐಆರ್ಸಿಟಿಸಿ ವೆಬ್ಸೈಟ್ ಮತ್ತು ಆ್ಯಪ್ ಮೂಲಕ ತತ್ಕಾಲ್ ಟಿಕೆಟ್ ಕಾಯ್ದಿರಿಸುತ್ತಿದ್ದಾರೆ. ಜುಲೈ ಒಂದರಿಂದ ಕಾಯ್ದಿರಿಸುವಿಕೆಯಲ್ಲಿ ಯಾವುದೇ ಅಡೆತಡೆಗಳನ್ನು ತಪ್ಪಿಸಲು ಬಳಕೆದಾರರು ಐಆರ್ಸಿಟಿಸಿ ಖಾತೆಗಳನ್ನು ಆಧಾರ್ ಸಂಖ್ಯೆಯ ಜತೆ ಸಂಪರ್ಕಿಸುವಂತೆ ರೈಲ್ವೆ ಇಲಾಖೆ ಸಲಹೆ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News