×
Ad

ರಾಜಸ್ಥಾನ | ಡ್ರೋನ್ ಪತ್ತೆ; ಭದ್ರತಾ ಸಂಸ್ಥೆಗಳಿಂದ ಕಟ್ಟೆಚ್ಚರ

Update: 2025-05-15 21:54 IST

PC : PTI 

ಜೈಪುರ: ಭಾರತ-ಪಾಕಿಸ್ತಾನ ಗಡಿಯ ರಾಜಸ್ಥಾನದ ಶ್ರೀ ಗಂಗಾನಗರ್ ಜಿಲ್ಲೆಯ ಹೊಲವೊಂದರಲ್ಲಿ ಗುರುವಾರ ಬೆಳಗ್ಗೆ ಡ್ರೋನ್ ಒಂದು ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ.

ಅನೂಪ್‌ಗಢ ಪ್ರದೇಶದ ಗ್ರಾಮಸ್ಥರು ಬೆಳಗ್ಗೆ ಸುಮಾರು 9.45ಕ್ಕೆ ಹೊಲದಲ್ಲಿ ಡ್ರೋನ್ ಅನ್ನು ನೋಡಿದ್ದಾರೆ ಹಾಗೂ ಕೂಡಲೇ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಅನೂಪ್‌ಗಢ ಪೊಲೀಸ್ ಠಾಣೆಯ ಅಧಿಕಾರಿ ಈಶ್ವರ್ ಜಾಂಗಿಡ್, ‘‘ತಾನು ಬಿಎಸ್‌ಎಫ್‌ಗೆ ಮಾಹಿತಿ ನೀಡಿದೆ. ಅವರು ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು’’ ಎಂದಿದ್ದಾರೆ.

ಈ ಡ್ರೋನ್ ಸರಿಸುಮಾರು 5-7 ಅಡಿ ಉದ್ದವಿದೆ. ಅದರ ಕ್ಯಾಮರಾ ಒಡೆದಿದೆ ಹಾಗೂ ಪ್ರತ್ಯೇಕಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

‘‘ನಾವು ಡ್ರೋನ್ ಅನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಈ ಪ್ರದೇಶವನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಾಂಬ್ ನಿಷ್ಕ್ರಿಯ ದಳವನ್ನು ಕೂಡ ಕರೆಸಲಾಗಿದೆ’’ ಎಂದು ಜಾಂಗಿಡ್ ಹೇಳಿದ್ದಾರೆ.

ಈ ಡ್ರೋನ್‌ ನ ಮೂಲ ಹಾಗೂ ಉದ್ದೇಶವನ್ನು ನಿರ್ಧರಿಸಲು ವಿಧಿವಿಜ್ಞಾನ ಹಾಗೂ ತಾಂತ್ರಿಕ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News