×
Ad

ರಾಜಸ್ಥಾನ: ಮತ್ತೆ ಇಬ್ಬರು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆ

Update: 2023-08-27 22:22 IST

ಜೈಪುರ: ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ನಾಗರಿಕ ಸೇವಾ ಆಯೋಗದ ಪರೀಕ್ಷೆಗೆ ತರಬೇತು ನೀಡುವ ದೇಶದ ಕೇಂದ್ರವಾಗಿರುವ ರಾಜಸ್ಥಾನದ ಕೋಟಾದಲ್ಲಿ ಮತ್ತೆ ಇಬ್ಬರು ನೀಟ್ ಆಕಾಂಕ್ಷಿಗಳು ರವಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಇಬ್ಬರು ವಿದ್ಯಾರ್ಥಿಗಳನ್ನು ಮಹಾರಾಷ್ಟ್ರದ ಆವಿಷ್ಕಾರ್ ಶುಭಾಂಗಿ ಹಾಗೂ ಬಿಹಾರದ ಆದರ್ಶ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆವಿಷ್ಕಾರ್ ಸುಭಾಂಗಿ ವೈದ್ಯಕೀಯ ಸಾಮಾನ್ಯ ಪರೀಕ್ಷೆ ನೀಟ್ಗೆ ತರಬೇತಿ ಪಡೆಯುತ್ತಿದ್ದರು. ಕೋಟಾದಲ್ಲಿ ತನ್ನ ಅಜ್ಜಿ-ಅಜ್ಜಂದಿರೊಂದಿಗೆ ವಾಸಿಸುತ್ತಿದ್ದರು. ಪರೀಕ್ಷೆಯ ಬಳಿಕ ಅಪರಾಹ್ನ ಅವರು ತರಬೇತು ಕೇಂದ್ರದ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೋರ್ವ ನೀಟ್ ಆಕಾಂಕ್ಷಿಯಾಗಿದ್ದ ಬಿಹಾರದ ಆದರ್ಶ್ ಕೂಡ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News