×
Ad

ಸಹೋದರಿಯರು ಮತ್ತು ಪುತ್ರಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ರಾಜಸ್ಥಾನ ಸಹಿಸದು..: ಸಾರ್ವಜನಿಕ ಸಭೆಯಲ್ಲಿ ಮೋದಿ ಭಾಷಣ

Update: 2023-07-27 23:10 IST

ಪ್ರಧಾನಿ ನರೇಂದ್ರ ಮೋದಿ Photo: PTI

ಜೈಪುರ: ರಾಜಸ್ಥಾನದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿದೆಯೆನ್ನಲಾದ ದೌರ್ಜನ್ಯಗಳನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜಧಾನಿ ಜೈಪುರಕ್ಕೆ ಸಮೀಪದ ಸಿಕರ್ ಎಂಬಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಈಗ ಈ ರಾಜ್ಯದಲ್ಲಿ ಇರುವುದು ಒಂದೇ ಘೋಷಣೆ: ‘‘ಸಹೋದರಿಯರು ಮತ್ತು ಪುತ್ರಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ರಾಜಸ್ಥಾನ ಸಹಿಸದು..’’ ಎಂದು ಹೇಳಿದರು.

‘‘ಸಾಕಪ್ಪಾ ಸಾಕು.. ರಾಜಸ್ಥಾನವು ಶೂರರು ಮತ್ತು ಧೈರ್ಯಶಾಲಿಗಳ ನೆಲ. ರಾಜಸ್ಥಾನಿಗಳು ಬೇಡುವುದಿಲ್ಲ, ಅವರು ಗರ್ಜಿಸುತ್ತಾರೆ. ಹಾಗಾಗಿ, ಈಗ ಎಲ್ಲೆಡ ಒಂದೇ ಗರ್ಜನೆ ಕೇಳಿಸುತ್ತಿದೆ, ಪ್ರತಿಯೋರ್ವ ರಾಜಸ್ಥಾನಿಯ ನಿರ್ಧಾರ ಮತ್ತು ಘೋಷಣೆ ಒಂದೇ: ‘‘ಸಹೋದರಿಯರು ಮತ್ತು ಪುತ್ರಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ರಾಜಸ್ಥಾನ ಸಹಿಸದು..’’ ಎಂದು ಮೋದಿ ಹೇಳಿದರು.

ಬಳಿಕ, ದಲಿತರ ವಿರುದ್ಧದ ಅಪರಾಧಗಳು ಮತ್ತು ಸಾಲಪೀಡಿತ ರೈತರನ್ನು ಉಲ್ಲೇಖಿಸಿ ಮಾತನಾಡಿದ ಮೋದಿ ಇದೇ ಘೋಷಣೆಯನ್ನು ಕೂಗಿದರು. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರದ ಬಗ್ಗೆಯೂ ಪ್ರಧಾನಿ ಮಾತನಾಡಿದರು.

ಬಳಿಕ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಭ್ರಷ್ಟಾಚಾರ ಆರೋಪಗಳಿಗೆ ಪುರಾವೆಗಳನ್ನು ಹೊಂದಿದೆಯೆನ್ನಲಾದ ‘‘ಕೆಂಪು ಡೈರಿ’’ಯ ಬಗ್ಗೆಯೂ ಮೋದಿ ಮಾತನಾಡಿದರು.

‘‘ಕಾಂಗ್ರೆಸ್ ಅಂದರೆ ದರೋಡೆ ಮಾಡುವ ಅಂಗಡಿ, ಸುಳ್ಳಿನ ಮಾರುಕಟ್ಟೆ. ಈ ದರೋಡೆ ಅಂಗಡಿಯ ಇತ್ತೀಚಿನ ಉತ್ಪನ್ನವೇ ಕೆಂಪು ಡೈರಿ’’ ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News