×
Ad

ಗೋವಾದ ರೆಸಾರ್ಟ್ ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ: ಗುಜರಾತ್ ವ್ಯಕ್ತಿಯ ಬಂಧನ

Update: 2023-08-25 14:58 IST

Photo: PTI

ಪಣಜಿ: ಉತ್ತರ ಗೋವಾದ ಅಸ್ಸೋನೋರಾ ಗ್ರಾಮದ ರೆಸಾರ್ಟ್ ನಲ್ಲಿ ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗುಜರಾತ್ ನ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಈ ಘಟನೆ ಆಗಸ್ಟ್ 23 ರಂದು ನಡೆದಿದ್ದು, ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು 47 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ, ಆರೋಪಿಯನ್ನು ಲಕ್ಷ್ಮಣ್ ಶಿಯಾರ್ ಎಂದು ಗುರುತಿಸಲಾಗಿದೆ, ಈತ ಕೂಡ ಪ್ರವಾಸಿಯಾಗಿ ಗೋವಾಗೆ ಭೇಟಿ ನೀಡಿದ್ದ ಎಂದು ಪೊಲೀಸರು ಹೇಳಿದರು.

"ಮಹಿಳೆ ಹಾಗೂ ಆರೋಪಿ ಲಕ್ಷ್ಮಣ್ ಈ ಹಿಂದೆ ವಿಮಾನದಲ್ಲಿ ಪರಸ್ಪರ ಭೇಟಿಯಾಗಿ ಸ್ನೇಹ ಬೆಳೆಸಿಕೊಂಡಿದ್ದರು. ತಮ್ಮಿಬ್ಬರ ಸಂಭಾಷಣೆಯ ಸಮಯದಲ್ಲಿ ಲಕ್ಷ್ಮಣ್, ಮಹಿಳೆಯ ಫೋನ್ ಸಂಖ್ಯೆಯನ್ನು ತೆಗೆದುಕೊಂಡಿದ್ದ. ನಂತರ ಫೋನ್ ಮೂಲಕ ಆಕೆಯೊಂದಿಗೆ ಸಂಪರ್ಕದಲ್ಲಿದ್ದ" ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜಿವ್ಬಾ ದಳವಿ ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ ಮಹಿಳೆ ಹಾಗೂ ಪುರುಷ ಪ್ರತ್ಯೇಕವಾಗಿ ಗೋವಾಗೆ ಭೇಟಿ ನೀಡಿದ್ದರು. ಆಗಸ್ಟ್ 23 ರಂದು ಮಹಿಳೆಯ ಫೋನ್ ಗೆ ಕರೆ ಮಾಡಿದ್ದ ಆರೋಪಿಯು ಅಲ್ಲಿನ ಸೌಕರ್ಯಗಳನ್ನು ತೋರಿಸುವ ನೆಪದಲ್ಲಿ ಅಸ್ಸೋನೋರಾದಲ್ಲಿ ತಾನು ತಂಗಿದ್ದ ರೆಸಾರ್ಟ್ ಗೆ ಭೇಟಿ ನೀಡುವಂತೆ ಮಹಿಳೆಯ ಮನವೊಲಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

"ಮಹಿಳೆ ರೆಸಾರ್ಟ್ ಗೆ ಭೇಟಿ ನೀಡಿದಾಗ ಆರೋಪಿಯು ಮಹಿಳೆಯನ್ನು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ" ಎಂದು ದಳವಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News