×
Ad

2800 ಕೋಟಿ ರೂಪಾಯಿ ವಂಚನೆ ಪ್ರಕರಣ: ಅನಿಲ್ ಅಂಬಾನಿ ಸೇರಿ ಐವರ ವಿರುದ್ಧ ಆರೋಪಪಟ್ಟಿ

Update: 2025-09-19 09:41 IST

PC: x.com/htTweets

ಮುಂಬೈ: ನಕಲಿ ಸಾಲ ವ್ಯವಹಾರದಿಂದಾಗಿ ಯೆಸ್ ಬ್ಯಾಂಕ್ ಗೆ  2797 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾದ ಪ್ರಕರಣದಲ್ಲಿ ಧೀರೂಬಾಯಿ ಅಂಬಾನಿ ಉದ್ಯಮ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ, ಬ್ಯಾಂಕಿನ ಸಹ ಸಂಸ್ಥಾಪಕ ರಾಣಾ ಕಪೂರ್, ಆತನ ಪತ್ನಿ ಬಿಂದು, ಪುತ್ರಿಯರಾದ ರಾಧಾ ಕಪೂರ್ ಮತ್ತು ರೋಶನಿ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ.

ಕಪೂರ್ ನಿರ್ದೇಶನದಂತೆ ಎಡಿಎಯ ವಾಣಿಜ್ಯ ಫೈನಾನ್ಸ್ (ಆರ್‌ಸಿಎಫ್ಎಲ್) ಮತ್ತು ಗೃಹ ಫೈನಾನ್ಸ್ (ಆರ್‌ಎಚ್ಎಫ್ಎಲ್)ನ ಡಿಬೆಂಚರತ್ ಮತ್ತು ವಾಣಿಜ್ಯ ಸಾಲಪತ್ರಗಳಲ್ಲಿ ಬ್ಯಾಂಕ್ ಹೂಡಿಕೆ ಮಾಡಿತ್ತು. ಕ್ರೆಡಿಟ್ ರೇಟಿಂಗ್ ನಲ್ಲಿ ಇದರ ಕಳಪೆ ಸಾಧನೆ ಇದ್ದರೂ ಹೂಡಿಕೆ ಮಾಡಲಾಗತ್ತು. ಇದಕ್ಕೆ ಪ್ರತಿಯಾಗಿ ಹಣವನ್ನು ಎಸ್‌ಬ್ಯಾಂಕ್ ಪ್ರವರ್ತಕರ ಕಂಪನಿಗಳಿಗೆ ಎಡಿಎ ಕಂಪನಿಗಳಿಂದ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.

ಯೆಸ್ ಬ್ಯಾಂಕಿಗೆ ವಂಚಿಸಿದ ಪ್ರಕರಣದಲ್ಲಿ ಸಿಬಿಐ ಈ ಮುನ್ನ ಡಿಎಚ್ಎಫ್ಎಲ್ ನ ಪ್ರವರ್ತಕ ಕಪಿಲ್ ವಾಧ್ವಾನಿ ಮತ್ತು ಸಹೋದರ ಧೀರಜ್ ವಾಧ್ವಾನಿ ಅವರ ವಿರುದ್ಧವೂ ತನಿಖೆ ನಡೆಸಿತ್ತು.

ಅನಿಲ್ ಅಂಬಾನಿ ನೇತೃತ್ವದ ಕಂಪನಿಗಳ ವಹಿವಾಟಿಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲ ಆರೋಪಪಟ್ಟಿ ಸಲ್ಲಿಸಿದ್ದಾಗಿ ಸಿಬಿಐ ಗುರುವಾರ ಪ್ರಕಟಿಸಿದೆ. ಆರೋಪಪಟ್ಟಿಯಲ್ಲಿ ಅನಿಲ್ ಅಂಬಾನಿ, ರಾಣಾ ಕಪೂರ್, ಬಿಂದು ಕಪೂರ್, ರಾಧಾ ಕಪೂರ್, ರೋಶನಿ ಕಪೂರ್, ಆರ್‌ಸಿಎಫ್ಎಲ್, ಆರ್‌ಎಚ್ಎಫ್ಎಲ್, ಆರ್‌ಎಬಿ ಎಂಟರ್ಪ್ರೈಸಸ್ ಲಿಮಿಟೆಡ್, ಇಮ್ಯಾಜಿಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್, ಬ್ಲಿಸ್ ಹೌಸ್ ಪ್ರೈವೇಟ್ ಲಿಮಿಟೆಡ್, ಇಮ್ಯಾಜಿನ್ ಹೆಬಿಟೇಟ್ ಪ್ರೈವೇಟ್ ಲಿಮಿಟೆಡ್, ಇಮ್ಯಾಜಿನ್ ರೆಸಿಡೆನ್ಸ್ ಪ್ರೈವೇಟ್ ಲಿಮಿಟೆಡ್, ಮಾರ್ಗನ್ ಕ್ರೆಡಿಟ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಆರೋಪ ಹೊರಿಸಲಾಗಿದೆ.

ಹೆಸ್ ಬ್ಯಾಂಕಿನ ಮುಖ್ಯ ವಿಚಕ್ಷಣಾಅಧಿಕಾರಿ 2022ರಲ್ಲಿ ಅನಿಲ್ ಅಂಬಾನಿ ಮತ್ತು ರಾಣಾ ಕಪೂರ್ ಕಂಪನಿಗಳ ವಿರುದ್ಧ ಸಿಬಿಐಗೆ 2022ರಲ್ಲಿ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News