×
Ad

ಸಂಭಲ್ ಹಿಂಸಾಚಾರ ಪ್ರಕರಣ: ಸಾರ್ವಜನಿಕ ಸ್ಥಳಗಳಲ್ಲಿ 74 ಶಂಕಿತ ಆರೋಪಿಗಳ ಭಾವಚಿತ್ರಗಳ ಪ್ರಕಟನೆ

Update: 2025-02-15 18:58 IST

    PC :  scroll.in

ಲಕ್ನೊ: ಉತ್ತರ ಪ್ರದೇಶದ ಸಂಭಲ್ ನಲ್ಲಿ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆನ್ನಲಾದ 74 ಶಂಕಿತ ಆರೋಪಿಗಳ ಭಾವಚಿತ್ರಗಳನ್ನು ಶುಕ್ರವಾರ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ, ಸಂಭಲ್ ನ ವಿವಿಧ ಸ್ಥಳಗಳಲ್ಲಿ ಈ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದ್ದು, ಆರೋಪಿಗಳನ್ನು ಗುರುತಿಸಿ, ಅವರ ಪತ್ತೆಗೆ ಪೊಲೀಸರಿಗೆ ನೆರವು ನೀಡುವಂತೆ ಸ್ಥಳೀಯ ನಿವಾಸಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ವಿಶ್ವಾಸಸಾರ್ಹ ಸಾಕ್ಷಿ ನೀಡುವ ವ್ಯಕ್ತಿಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.

“ಕೈಯಲ್ಲಿ ಕಲ್ಲು ಹಿಡಿದಿರುವ ಶಂಕಿತ ಆರೋಪಿಗಳ ಭಾವಚಿತ್ರಗಳನ್ನು ಈ ಭಿತ್ತಿಚಿತ್ರ ಒಳಗೊಂಡಿದೆ” ಎಂದು ಶ್ರೀಶ್ ಚಂದ್ರ ತಿಳಿಸಿದ್ದಾರೆ ಎಂದು The Indian Express ವರದಿ ಮಾಡಿದೆ.

“ಡ್ರೋನ್ ಕ್ಯಾಮೆರಾಗಳ ಮೂಲಕ ಸೆರೆಯಾಗಿರುವ ಸಿಸಿಟಿವಿ ದೃಶ್ಯಾದವಳಿಗಳು, ಸಿಸಿಟಿವಿ ಹಾಗೂ ಮೊಬೈಲ್ ಫೋನ್ ಗಳಲ್ಲಿ ಚಿತ್ರೀಕರಿಸಲಾಗಿರುವ ವಿಡಿಯೊಗಳಲ್ಲಿರುವ ಶಂಕಿತ ಆರೋಪಿಗಳೇ ಹಿಂಸಾಚಾರದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ” ಎಂದೂ ಅವರು ಹೇಳಿದ್ದಾರೆ.

ಕಳೆದ ವರ್ಷದ ನವೆಂಬರ್ 24ರಂದು ಚಾಂದೌಸಿ ಪಟ್ಟಣದಲ್ಲಿರುವ ಶಾಹಿ ಜಾಮಾ ಮಸೀದಿಯ ನ್ಯಾಯಾಲಯ ನಿರ್ದೇಶಿತ ಸಮೀಕ್ಷೆಗೆ ಮುಸ್ಲಿಮರ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ಸಂಭಲ್ ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News