×
Ad

ಶಿಮ್ಲಾ ಮಸೀದಿ ವಿವಾದ: ಧಾಲಿ ಸುರಂಗ ಮಾರ್ಗದ ಬಳಿ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದ ಪ್ರತಿಭಟನಾಕಾರರು

Update: 2024-09-11 16:09 IST

PC : PTI 

ಶಿಮ್ಲಾ: ಮಸೀದಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರ ಗುಂಪೊಂದು ಬುಧವಾರ ಪೊಲೀಸ್ ಅಧಿಕಾರಿಗಳೊಂದಿಗೆ ಘರ್ಷಣೆಗಿಳಿದ ಘಟನೆ ವರದಿಯಾಗಿದೆ.

ಮಸೀದಿಯೊಂದರಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪಿಸಿ ಹಿಂದುತ್ವ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದರಿಂದ ಶಿಮ್ಲಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಿಗೇ ಪೊಲೀಸರು ಮಂಗಳವಾರದಿಂದ ಶಿಮ್ಲಾದ ಸಂಜೌಲಿ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ.

ಭಾರತೀಯ ನಾಗರಿಕ ಸಂಹಿತೆಯ ಸೆಕ್ಷನ್ 163ರ ಅಡಿ ಶಿಮ್ಲಾ ಜಿಲ್ಲಾಡಳಿತವು ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದು, ಅನುಮತಿ ಇಲ್ಲದೆ ಐವರಿಗಿಂತ ಹೆಚ್ಚು ಮಂದಿ ಸೇರುವುದು ಹಾಗೂ ಲಾಠಿಗಳು, ಚೂರಿಗಳು, ದೊಣ್ಣೆಗಳು, ಈಟಿಗಳು ಹಾಗೂ ಖಡ್ಗಗಳಂತಹ ಮಾರಕ ಆಯುಧಗಳನ್ನು ತಮ್ಮೊಂದಿಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

ಮಸೀದಿಯೊಳಗಿನ ಅಕ್ರಮ ಕಟ್ಟಡ ನಿರ್ಮಾಣವನ್ನು ನೆಲಸಮಗೊಳಿಸಬೇಕು ಹಾಗೂ ರಾಜ್ಯದ ಹೊರಗಿನಿಂದ ಬರುವವರ ನೋಂದಣಿಯನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿ ಕೆಲವು ಹಿಂದುತ್ವ ಸಂಘಟನೆಗಳು ಬುಧವಾರ ಬಂದ್ ಗೆ ಕರೆ ನೀಡಿದ್ದವು.

ಇದಕ್ಕೂ ಮುನ್ನ, ಕಳೆದ ಗುರುವಾರ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಿಂದುತ್ವ ಸಂಘಟನೆಗಳು ವಿಧಾನಸೌಧ ಹಾಗೂ ಸಂಜೌಲಿ ಪ್ರದೇಶದಲ್ಲಿರುವ ಚೌರ ಮೈದಾನದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News