ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ಮಾಜಿ ಆಡಳಿತಾಧಿಕಾರಿಯನ್ನು ಬಂಧಿಸಿದ ಎಸ್‌ಐಟಿ
Update: 2025-10-23 13:12 IST
ಬಿ.ಮುರಳಿ ಬಾಬು (Photo credit: indiatoday.in)
ತಿರುವನಂತಪುರಂ: ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ಗುರುವಾರ ದೇವಾಲಯ ಮಂಡಳಿಯ ಮಾಜಿ ಆಡಳಿತಾಧಿಕಾರಿ ಬಿ.ಮುರಳಿ ಬಾಬು ಎಂಬವರನ್ನು ಬಂಧಿಸಿದೆ.
ದೇವಾಲಯದ ಚಿನ್ನ ಲೇಪಿತ ಪ್ರಭಾವಳಿಗಳು ಹಾಗೂ ದ್ವಾರಪಾಲಕ ವಿಗ್ರಹಗಳ ಚಿನ್ನ ಲೇಪನ ಕೆಲಸದಲ್ಲಿ ಅಕ್ರಮಗಳು ನಡೆದಿವೆ ಎಂಬ ಪ್ರಕರಣಗಳ ಕುರಿತು ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ.
ದೇವಾಲಯದಿಂದ ಚಿನ್ನ ನಾಪತ್ತೆಯಾದ ಆರೋಪದ ಮೇಲೆ ಟ್ರವಾಂಕೂರ್ ದೇವಸ್ವಂ ಮಂಡಳಿಯಿಂದ ಅಮಾನತುಗೊಂಡಿದ್ದ ಬಿ.ಮುರಳಿ ಬಾಬುವನ್ನು ಅವರ ಚಂಗನ್ ಸ್ಸೆರಿ ನಿವಾಸದಿಂದ ಬುಧವಾರ ರಾತ್ರಿ ಬಂಧಿಸಲಾಗಿದೆ.
ಬಳಿಕ, ಅವರನ್ನು ವಿಚಾರಣೆಗೊಳಪಡಿಸಲು ತಿರುವನಂತಪುರಂನಲ್ಲಿರುವ ಅಪರಾಧ ವಿಭಾಗ ಕಚೇರಿಗೆ ಸ್ಥಳಾಂತರಿಸಲಾಗಿದೆ.