×
Ad

ತರಗತಿಯಲ್ಲಿ ದೌರ್ಜನ್ಯಕ್ಕೊಳಗಾದ ಬಾಲಕನನ್ನು ದತ್ತು ಪಡೆಯಲು ಸಿದ್ಧ ಎಂದ ಕೇರಳ ಸರ್ಕಾರ

Update: 2023-08-28 17:02 IST

ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ (ANI)

ತಿರುವನಂತಪುರಂ: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಶಿಕ್ಷಕಿಯ ಸೂಚನೆಯಂತೆ ತನ್ನದೇ ಸಹಪಾಠಿಗಳಿಂದ ಹೊಡೆತ ತಿಂದ ಅಲ್ಪಸಂಖ್ಯಾತ ಸಮುದಾಯದ ಬಾಲಕನನ್ನು ದತ್ತು ಪಡೆದುಕೊಳ್ಳಲು ತಾನು ಸಿದ್ಧ ಎಂದು ಕೇರಳ ಸರ್ಕಾರ ಇಂದು ಹೇಳಿದೆ.

ಬಾಲಕನ ಹೆತ್ತವರು ಒಪ್ಪಿದರೆ ಆತನಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲಾಗುವುದು ಎಂದು ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಹೇಳಿದ್ದಾರೆ.

ಕೇರಳದ ಎಡರಂಗ ಸರ್ಕಾರ ಮತ್ತು ಜನರು ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದ ಸಚಿವರು, ಸದ್ಯ ಕೇರಳದ ಶಾಲೆಯೊಂದರಲ್ಲಿ ಹಿಂಸಾಪೀಡಿತ ಮಣಿಪುರ ರಾಜ್ಯದ ಮಗುವೊಂದಕ್ಕೂ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.

ಕೇರಳದ ಶಿಕ್ಷಣ ಸಚಿವರು ಈಗಾಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಪತ್ರ ಬರೆದು ಈ ನಿರ್ದಿಷ್ಟ ಪ್ರಕರಣದಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೋರಿದ್ದಾರೆ. ಇಂತಹ ಒಂದು ಘಟನೆ ಮಕ್ಕಳ ಮನಸ್ಸುಗಳಲ್ಲಿ ಅಪಾಯಕಾರಿ ಪ್ರವೃತ್ತಿ ಬೆಳೆಸಲು ಕಾರಣವಾಗಬಹುದು ಎಂದು ಕೇರಳ ಸಚಿವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News